VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!

Cheetha
Published on

ಕೇಪ್​ಟೌನ್​(ದಕ್ಷಿಣ ಆಫ್ರಿಕಾ): ಪ್ರಾಣಿಗಳು ಬೇಟೆಯಾಡುವ ದೃಶ್ಯಗಳನ್ನು ನೋಡುವುದೇ ಒಂದು ರೋಚಕ ಸಂಗತಿ. ಅದರಲ್ಲೂ ಪ್ರಾಣಿ ಪ್ರಿಯರ ಕಣ್ಣಿಗಂತೂ ಹಬ್ಬವೋ ಹಬ್ಬ. ಅಂಥದ್ದೆ ಜಬರ್ದಸ್ತ್​ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಣ್ಣು ಮಿಟುಕಿಸುವುದರಲ್ಲಿ ಮೊಸಳೆಯೊಂದು ಹೊಂಚು ಹಾಕಿ ಚಿರತೆಯನ್ನು ಬೇಟೆಯಾಡಿದ ರೋಮಾಂಚನಕಾರಿ ವಿಡಿಯೋ ನೋಡುಗರ ಕಣ್ಮನ ತಣಿಸುವುದರಲ್ಲಿ ಸಂದೇಹವೇ ಇಲ್ಲ.

ತುಂಬಾ ದಣಿದಿದ್ದ ಚಿರತೆಯೊಂದು ಬಾಯಾರಿಕೆಯಿಂದ ನೀರು ಕುಡಿಯಲೆಂದು ನೀರಿನ ಹೊಂಡದ ಬಳಿ ಬರುತ್ತದೆ. ಆದರೆ, ಅದೇ ನೀರಿನ ಅಡಿಯಲ್ಲಿ ಮೊಸಳೆ ರೂಪದಲ್ಲಿ ತನ್ನ ಮೃತ್ಯು ಅವಿತು ಕುಳಿತಿದೆ ಎಂಬುದು ಪಾಪದ ಚಿರತೆಗೆ ತಿಳಿದಿಲ್ಲ.

ಇತ್ತ ನೀರಿಗೆ ಬಾಯಾಕಿದ ಚಿರತೆ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿರುವಾಗಲೇ ತುಂಬಾ ಹಸಿದು ಹೊಂಚು ಹಾಕಿದ್ದ ಮೊಸಳೆ ಕಣ್ಣು ಮಿಟುಕಿಸುವುದರಲ್ಲಿ ಚಿರತೆಯನ್ನು ಬೇಟೆಯಾಡುತ್ತದೆ. ಚಿರತೆಯ ಕುತ್ತಿಗೆಗೆ ಬಾಯಿ ಹಾಕಿ ನೀರಿನ ಒಳಗೆ ಎಳೆದೊಯ್ಯುತ್ತದೆ. ಅಲ್ಲಿಗೆ ಚಿರತೆ ಕತೆ ಮುಗಿದಂತೆ. ಅಲ್ಲಿಯೇ ಇದ್ದ ಇನ್ನುಳಿದ ಚಿರತೆಗಳು ಅಸಹಾಕರಂತೆ ನೋಡುತ್ತಾ ನಿಂತಿರುತ್ತವೆ.

ಇನ್ನು ಈ ರೋಮಾಂಚನಕಾರಿ ದೃಶ್ಯವನ್ನು ದಕ್ಷಿಣ ಆಫ್ರಿಕಾದ ವೈಲ್ಡ್​ಅರ್ಥ್​ ಸಫಾರಿ ಗೈಡ್​ ಬುಸಾನಿ ಮ್ತಾಲಿ (30) ಎಂಬುವರು ಕ್ವಾಜುಲು-ನಟಾಲ್​ ಪ್ರಾಂತ್ಯದ ಮೀಸಲು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಮೊಸಳೆಗೆ ಬೇಟೆ ನೋಡಿ ನೆಟ್ಟಿಗರು ಬೆಕ್ಕಸ ಬೆರಗಾಗಿದ್ದಾರೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net