More

    ಕಮಲ್​ ಹಾಸನ್​ ಪ್ರಣಾಳಿಕೆ ನೋಡಿ ಗೃಹಿಣಿಯರಿಗೆ ಖುಷಿಯೋ ಖುಷಿ: ಅಂಥದ್ದೇನಿದೆ ನೋಡಿ…

    ಕಾಂಚೀಪುರಂ: ಚುನಾವಣೆ ಎಂದರೆ ಅಲ್ಲಿ ಭರವಸೆಗಳ ಮಹಾಪೂರವೇ ಹರಿದುಬರುವುದು ಹೊಸ ವಿಷಯವೇನಲ್ಲ. ತಾವು ಗೆದ್ದರೆ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದೆಲ್ಲಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡು, ಒಂದು ವೇಳೆ ಅಧಿಕಾರಕ್ಕೆ ಬಂದರೆ ಅದರಲ್ಲಿ ಕಾಲಂಶವನ್ನೂ ಪಾಲನೆ ಮಾಡದವರೇ ಬಹುತೇಕ ರಾಜಕೀಯ ಧುರೀಣರು ಎನ್ನುವ ವಿಷಯವೂ ಎಲ್ಲರಿಗೂ ತಿಳಿದದ್ದೇ.

    ಇದೇ ಕಾರಣಕ್ಕೆ ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಓದುವುದರೆಂದರೆ ಹಾಸ್ಯಾಸ್ಪದ ಎನ್ನುವಂತಾಗಿದೆ. ಆದರೆ ಅಲ್ಲೊಬ್ಬ, ಇಲ್ಲೊಬ್ಬ ರಾಜಕಾರಣಿಗಳು ಮಾತ್ರ ತಮ್ಮ ಭರವಸೆಯನ್ನು ಈಡೇರಿಸುವ ಉದಾಹರಣೆಗಳೂ ಇವೆ.

    ಅದೇನೇ ಇರಲಿ. ತಮಿಳುನಾಡು ವಿಧಾನಸಭೆಗೆ ‘ಮಕ್ಕಳ್‌ ನೀದಿ ಮಯ್ಯಂ’(ಎಂಎನ್‌ಎಂ) ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿದಿರುವ ಖ್ಯಾತ ನಟ ಕಮಲ್​ ಹಾಸನ್​ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಭರವಸೆ ಸದ್ಯ ಭಾರಿ ಸುದ್ದಿ ಮಾಡುತ್ತಿದೆ. ಏಕೆಂದರೆ ಈ ಪ್ರಣಾಳಿಕೆ ಓದಿದ ಗೃಹಿಣಿಯರು ಅರ್ಥಾತ್​ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿರುವ ಮಹಿಳೆಯರಂತೂ ಬಹಳ ಖುಷಿಯಾಗಿದ್ದಾರೆ.

    ಇದಕ್ಕೆ ಕಾರಣ, ಮನೆಯಲ್ಲಿ ನಿತ್ಯ ಕೆಲಸಗಳನ್ನು ಮಾಡುವ ಮಹಿಳೆಯರಿಗೂ ವೇತನ ಸಿಗುವಂತೆ ಮಾಡುವುದಾಗಿ ಘೋಷಿಸಿದ್ದಾರೆ ಈ ನಟ. ಹೊರಗಡೆ ಉದ್ಯೋಗ ಮಾಡಿ ದುಡಿದರಷ್ಟೇ ಅದು ದುಡಿಮೆ, ದಿನಪೂರ್ತಿ ಮನೆಯಲ್ಲಿ ದುಡಿದು ಕುಟುಂಬಸ್ಥರ ಕಾಳಜಿ ವಹಿಸುವ ಗೃಹಿಣಿಗೆ ಸಂಬಳವೂ ಇಲ್ಲ, ಪ್ರಶಂಸೆಯ ಮಾತೂ ಇಲ್ಲ ಎನ್ನುವ ನೋವು ಇದೆ. ಇದನ್ನು ಸುಳ್ಳು ಮಾಡಿ, ಗೃಹಿಣಿಯರಿಗೂ ವೇತನ ಸಿಗುವಂತೆ ಮಾಡುತ್ತೇನೆ ಎಂದಿದ್ದಾರೆ ಕಮಲ್​ ಹಾಸನ್​.

    ಗೌರವಧನ ರೂಪದಲ್ಲಿ ವೇತನ ನೀಡುವ ಮೂಲಕ ಅವರಿಗೆ ಸಲ್ಲತಕ್ಕ ಘನತೆಯನ್ನು ನಮ್ಮ ಪಕ್ಷ ನೀಡಲಿದೆ. ಇದರ ಜತೆಗೆ ಪ್ರತಿಯೊಂದು ಮನೆಗೆ ಆಪ್ಟಿಕಲ್‌ ಫೈಬರ್‌ ಮೂಲಕ ಹೈಸ್ಪೀಡ್‌ ಇಂಟರ್​ನೆಟ್​ ಒದಗಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ತಮ್ಮ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಶ್ರಮಿಸಲಿದೆ ಎಂದಿದ್ದಾರೆ ಕಮಲ್​.

    ಇವೂ ಸೇರಿದಂತೆ ಒಟ್ಟು 7 ಸೂತ್ರಗಳ ಅಜೆಂಡಾಗಳನ್ನು ಹೊಂದಿರುವ ಅವರ ಪ್ರಣಾಳಿಕೆಯೊಂದಿಗೆ ಸದ್ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಭಾರತಕ್ಕೂ ಕಾಲಿಟ್ಟೇಬಿಡ್ತು ಬ್ರಿಟನ್​ ಸೋಂಕು! ಪ್ರವಾಸ ಕೈಗೊಂಡಿದ್ದ ಚೆನ್ನೈ ವ್ಯಕ್ತಿಗೆ ಪಾಸಿಟಿವ್​

    ಇಂಥವರೂ ಇರ್ತಾರೆ! ಹೋಟೆಲ್​ ಬಿಲ್ 75 ಪೈಸೆ… ಟಿಪ್ಸ್​ ಕೊಟ್ಟಿದ್ದು 4 ಲಕ್ಷ ರೂಪಾಯಿ!

    ಬಸ್ ಒಳಗೆ ಆಡುತ್ತಿದ್ದ ಬಾಲಕಿಯ ರೇಪ್​ ಮಾಡಿ ಗೋಣಿ ಚೀಲದಲ್ಲಿ ತುಂಬಿಟ್ಟ ಚಾಲಕ!

    ಪ್ರಾಪ್ತಳು ಮತಾಂತರಗೊಂಡು ತವರಿಗೆ ಬರದಿದ್ದರೂ ಮಧ್ಯೆ ಪ್ರವೇಶಿಸುವ ಅಗತ್ಯವಿಲ್ಲ ಎಂದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts