More

    ಇಂಥವರೂ ಇರ್ತಾರೆ! ಹೋಟೆಲ್​ ಬಿಲ್ 75 ಪೈಸೆ… ಟಿಪ್ಸ್​ ಕೊಟ್ಟಿದ್ದು 4 ಲಕ್ಷ ರೂಪಾಯಿ!

    ಓಹಿಯೋ (ಅಮೆರಿಕ): ಕೆಲವೊಮ್ಮೆ ಹಿಂದೆಂದೂ ಕೇಳರಿದ ಸಂಗತಿಗಳು ನಡೆಯುತ್ತವೆ. ವಿಚಿತ್ರ ಎನಿಸಿದರೂ ಸತ್ಯ ಎನ್ನುವಂಥ ಘಟನೆಗಳು ಜರುಗುತ್ತವೆ. ಅದೇ ರೀತಿ, ಎಂತೆಂಥ ಅಪರೂಪದ ವ್ಯಕ್ತಿತ್ವ ಇರುವವರು ನಮ್ಮ ನಡುವೆ ಇದ್ದಾರೆ ಎಂಬ ಅಚ್ಚರಿಯೂ ಆಗಿಹೋಗುತ್ತದೆ.

    ಅಂಥದ್ದೇ ಒಂದು ಅಚ್ಚರಿ ಪಶ್ಚಿಮ ಅಮೆರಿಕದ ಓಹಿಯೋ ನಗರದಲ್ಲಿ ನಡೆದಿದೆ. ಇದೇ ಕಾರಣಕ್ಕೆ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಅನಾಮಧೇಯ ವ್ಯಕ್ತಿಯ ಹೃದಯವಿಶಾಲತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಮಾಡಿರುವ ಚಿಕ್ಕ ಕೆಲಸವನ್ನೇ ದೊಡ್ಡದಾಗಿ ಬಿಂಬಿಸಿ ಫೋಟೋಗಳಿಗೆ ಪೋಸ್​ ಕೊಟ್ಟು ಜನಪ್ರಿಯತೆ ಗಳಿಸುವವರು ಒಂದೆಡೆಯಾದರೆ, ಎಂತೆಂಥ ಮಹತ್ಕಾರ್ಯಗಳನ್ನು ಮಾಡಿ ಪ್ರಚಾರವೇ ಬೇಡ ಎನ್ನುವ ಅತ್ಯಂತ ಕಡಿಮೆ ವ್ಯಕ್ತಿಗಳು ಇದ್ದಾರೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ಮಾಡಿರುವ ಸಂಗತಿಯಿದು.

    ಇಂಥವರೂ ಇರ್ತಾರೆ! ಹೋಟೆಲ್​ ಬಿಲ್ 75 ಪೈಸೆ... ಟಿಪ್ಸ್​ ಕೊಟ್ಟಿದ್ದು 4 ಲಕ್ಷ ರೂಪಾಯಿ!

    ಅಷ್ಟಕ್ಕೂ ಆಗಿರುವುದು ಏನೆಂದರೆ ಓಹಿಯೋದ ಟೊಲೆಡೊದಲ್ಲಿನ ಸೂಕ್ ಮೆಡಿಟರೇನಿಯನ್ ಕಿಚನ್ ಆ್ಯಂಡ್​ ಬಾರ್‌ನ ಒಂದರಲ್ಲಿ ಗ್ರಾಹಕನೊಬ್ಬರು ಭೇಟಿ ಕೊಟ್ಟಿದ್ದ. ತಮ್ಮ ಹೆಸರನ್ನು ಅವರು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆ ಹೋಟೆಲ್​ನಲ್ಲಿ ಅವರಿಗೆ ಆಗಿರುವ ಬಿಲ್ಲಿನ ಮೊತ್ತ 0.01 ಡಾಲರ್​ ಅಂದರೆ ಭಾರತೀಯ ರೂಪಾಯಿಗೆ ಹೋಲಿಸುವುದಾದರೆ ಕೇವಲ 75 ಪೈಸೆ. ಇಷ್ಟು ಕಡಿಮೆ ಮೊತ್ತಕ್ಕೆ ಅದ್ಯಾವ ತಿನಿಸು ಬರುತ್ತದೆ ಎನ್ನುವುದು ಮಾತ್ರ ಗೊತ್ತಿಲ್ಲ. ಬಿಲ್​ ವೀಕ್ಷಿಸಿದರೆ ಅದರಲ್ಲಿ ಓಪನ್​ ಫುಡ್​ 0.01 ಡಾಲರ್​ ಎಂದು ಉಲ್ಲೇಖಿಸಲಾಗಿದೆ.

    ಹೋಟೆಲ್​ ಬಿಟ್ಟು ಹೋದ ಮೇಲೆ ಅಲ್ಲಿರುವ ವೇಟರ್​ಗಳು ಸಾಮಾನ್ಯವಾಗಿ ಗ್ರಾಹಕರು ತಮಗೆ ಎಷ್ಟು ಟಿಪ್ಸ್​ ಇಟ್ಟು ಹೋಗಿದ್ದಾರೆ ಎಂದು ನೋಡುತ್ತಾರೆ. ಅದೇ ರೀತಿ ಅಲ್ಲಿಯ ಸಿಬ್ಬಂದಿ ಹೋದಾಗ ಸುಸ್ತಾಗಿ ಹೋದರು. ಏಕೆಂದರೆ ಅಲ್ಲಿ ಟಿಪ್ಸ್​ ಇದದ್ದು, 5,600 ಡಾಲರ್​ ಅಂದರೆ ಸುಮಾರು 4 ಲಕ್ಷದ 14 ಸಾವಿರ ರೂಪಾಯಿ!

    ಇಂಥವರೂ ಇರ್ತಾರೆ! ಹೋಟೆಲ್​ ಬಿಲ್ 75 ಪೈಸೆ... ಟಿಪ್ಸ್​ ಕೊಟ್ಟಿದ್ದು 4 ಲಕ್ಷ ರೂಪಾಯಿ!
    ಅದನ್ನು ನೋಡಿ ದಿಗಿಲುಗೊಂಡ ವೇಟರ್​ ಇದನ್ನು ಮಾಲೀಕರ ಗಮನಕ್ಕೆ ತಂದಿದ್ದಾರೆ. ಇಲ್ಲಿಯ ಪದ್ಧತಿಯಂತೆ ಟಿಪ್ಸ್​ ಕೂಡ ಬಿಲ್​ ಮೇಲೆ ನಮೂದು ಮಾಡಲಾಗುತ್ತದೆ. ಅದನ್ನು ನೋಡಿದಾಗ ಗ್ರಾಹಕರು ಉದ್ದೇಶಪೂರ್ವಕವಾಗಿ ಇಷ್ಟು ಹಣವನ್ನು ಟಿಪ್ಸ್​ ಇಟ್ಟು ಹೋಗಿರುವುದು ತಿಳಿದಿದೆ.

    ರೆಸ್ಟೋರೆಂಟ್​ನಲ್ಲಿ ಒಟ್ಟು 28 ಮಂದಿ ಸಿಬ್ಬಂದಿ ಇದ್ದು, ಪ್ರತಿಯೊಬ್ಬರಿಗೂ ಸುಮಾರು 200 ಡಾಲರ್​ ಅಂದರೆ ಸುಮಾರು ಹದಿನಾಲ್ಕುವರೆ ಸಾವಿರ ರೂಪಾಯಿ ಟಿಪ್ಸ್​ ಸಿಕ್ಕಂತಾಗಿದ್ದು, ಎಲ್ಲರೂ ಖುಷಿಯಿಂದ ಹಣವನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಕ್ರಿಸ್​ಮಸ್​ಗೆ ತಮಗೆ ಇದು ಸಿಕ್ಕಿರುವ ಗಿಫ್ಟ್​ ಎಂದುಕೊಂಡು ಸಂತಸದಿಂದ ಕುಣಿದಾಡುತ್ತಿದ್ದಾರೆ.

    ನಸುಕಿನಲ್ಲಿ ಭೀಕರ ಅಪಘಾತ: ಕಾರು ಬೆಂಕಿಗಾಹುತಿ- ರಕ್ಷಿಸಲು ಜನರಿದ್ದಲ್ಲದೇ ಐವರ ಸಜೀವ ದಹನ

    ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

    ಭಾರತಕ್ಕೂ ಕಾಲಿಟ್ಟೇಬಿಡ್ತು ಬ್ರಿಟನ್​ ಸೋಂಕು! ಪ್ರವಾಸ ಕೈಗೊಂಡಿದ್ದ ಚೆನ್ನೈ ವ್ಯಕ್ತಿಗೆ ಪಾಸಿಟಿವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts