ಗುಂಡು ಹಾರಿಸೋದು ಹೇಗೆಂದು ತೋರಿಸ್ತೀನಿ ಅಂತ ಪತ್ನಿ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ ಪತಿ!

Wife Death
Published on

ತುಮಕೂರು: ಗುಂಡು ಹಾರಿಸಿ ಪತ್ನಿಯನ್ನು ಪತಿ ಕೊಲೆಗೈದಿರುವ ಭೀಕರ ಘಟನೆ ತಾಲೂಕಿನ ಡಿ.ಕೊರಟಗೆರೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಶಾರದ (28) ಕೊಲೆಯಾದ ದುರ್ದೈವಿ. ಆಕೆಯ ಪತಿ ಕೃಷ್ಣಪ್ಪ ಈ ಕೃತ್ಯ ಎಸಗಿದ್ದಾನೆ.

ಬೇಟೆಗೆಂದು ಸ್ನೇಹಿತನ ಬಳಿ ನಾಡಬಂದೂಕು ತೆಗೆದುಕೊಂಡು ಬಂದಿದ್ದ ಆರೋಪಿ, ಗುಂಡು ಹಾರಿಸೋದು ತೋರಿಸುತ್ತೇನೆಂದು ಹೇಳಿ ಶಾರದಾ ತಲೆಗೆ ಗುಂಡಿಟ್ಟು ಕೊಂದಿದ್ದಾನೆ ಎನ್ನಲಾಗಿದೆ.

ಇನ್ನು ಕೊಲೆಗೆ ಕಾರಣ ತಿಳಿದುಬಂದಿಲ್ಲಾ. ಘಟನಾ ಸ್ಥಳಕ್ಕೆ ಹೆಬ್ಬೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net