ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ; ಸಚಿವರ ಪತ್ನಿ ಸೇರಿ ಇಬ್ಬರ ಸಾವು!

Car Main
Published on

ಉತ್ತರಕನ್ನಡ: ಅಂಕೋಲಾ ಬಳಿ ಸೋಮವಾರ ಸಂಭವಿಸಿ ಕಾರು ಅಪಘಾತದಲ್ಲಿ ಕೇಂದ್ರ ಸಚಿವರ ಪತ್ನಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕೇಂದ್ರ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯಕ ಅವರ ವಾಹನ ಅಂಕೋಲಾ ಕಂಚಿನಬೈಲ್ ಬಳಿ ಸೋಮವಾರ ಅಪಘಾತಕ್ಕೊಳಗಾಗಿದೆ. ಸಚಿವರಿಗೆ ತೀವ್ರ ಗಾಯಗಳಾಗಿದ್ದು, ಸಚಿವರ ಆಪ್ತ ಕಾರ್ಯದರ್ಶಿ ದೀಪಕ್ ರಾಮದಾದ ಗೂಮೆ ಮೃತಪಟ್ಟಿದ್ದಾರೆ.

ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನಕ್ಕೆ ಸೋಮವಾರ ಕುಟುಂಬ ಸಮೇತ ಆಗಮಿಸಿದ್ದ ಶ್ರೀಪಾದ ನಾಯಕ ಅವರು ಗಣಹವನ ನೆರವೇರಿಸಿದ್ದರು. ನಂತರ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಸಾಯಂಕಾಲ ಯಲ್ಲಾಪುರದಿಂದ ಹೊಸಕಂಬಿ ಮಾರ್ಗವಾಗಿ ಗೋಕರ್ಣಕ್ಕೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ಅಪಘಾತವಾಗಿದೆ.

ಅಪಘಾತವಾದ ಕಾರಿನಲ್ಲಿ ಒಟ್ಟು ಐವರಿದ್ದರು. ಗಂಭೀರವಾಗಿ ಗಾಯಗೊಂಡ ಸಚಿವ ಶ್ರೀಪಾದ ನಾಯಕ ಸೇರಿ ಮೂವರಿಗೆ ಅಂಕೋಲಾ‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗೋವಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net