More

    ಇದು ಧೈರ್ಯ ಅಂದ್ರೆ..!; ಸಿಂಹವನ್ನೇ ಹಿಮ್ಮೆಟ್ಟಿಸಿದ ಬೀದಿನಾಯಿ..!

    ಬೆಂಗಳೂರು: ಸಾಮಾನ್ಯವಾಗಿ ಬೀದಿನಾಯಿ ಅಟ್ಟಿಸಿಕೊಂಡು ಬಂದರೆ ಸುಮ್ಮನೆ ಒಂದು ಕಲ್ಲು ಎತ್ತಿಕೊಂಡು ಬೀಸಿದರೆ ಓಡಿಹೋಗಿಬಿಡುತ್ತದೆ. ಇಲ್ಲವೇ ಧೈರ್ಯವಾಗಿ ನಿಂತು ಬಿಟ್ಟರೆ ಅದೇ ಸುಮ್ಮನಾಗಿ ಬಿಡುತ್ತದೆ. ಆದರೆ ಇಲ್ಲೊಂದು ಬೀದಿನಾಯಿ ಸಿಂಹಗಳೆದುರೇ ತನ್ನ ಧೈರ್ಯವನ್ನು ಮೆರೆದಿದ್ದಲ್ಲದೆ, ಏಕಾಂಗಿಯಾಗಿ ಸಿಂಹಿಣಿಯನ್ನು ಹಿಮ್ಮೆಟ್ಟಿಸಿದೆ.

    ಅರಣ್ಯದಲ್ಲಿ ಕಂಡುಬಂದ ಇಂಥ ಅಪರೂಪದ ದೃಶ್ಯವೊಂದು ಜೀಪ್​ನಲ್ಲಿ ಸಫಾರಿಗೆ ಹೋಗಿದ್ದವರಿಗೆ ಅದೃಷ್ಟವಶಾತ್ ನೇರಾನೇರ ಕಾಣಲು ಸಿಕ್ಕಿದೆ. ಹೀಗೆ ಸಿಂಹಿಣಿಯನ್ನು ಹಿಮ್ಮೆಟ್ಟಿಸಿರುವ ಬೀದಿನಾಯಿ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಕಾಡಿನಲ್ಲಿ ಎದುರಾದ ಸಿಂಹಿಣಿಗಳೆರಡರಲ್ಲಿ ಒಂದು ಬೀದಿನಾಯಿಯ ಮೇಲೆರಗಿದೆ. ಸ್ವಲ್ಪದರಲ್ಲೇ ಅಪಾಯದಿಂದ ತಪ್ಪಿಸಿಕೊಂಡು ಕೆಲಕ್ಷಣಗಳ ಕಾಲ ಅಲ್ಲೇ ನಿಂತಿದೆ. ಬಳಿಕ ಧೈರ್ಯ ಮಾಡಿ ಸಿಂಹಿಣಿಯತ್ತ ಸಾಗಿದ ಅದರ ಮೇಲೇ ಎರಗಿದೆ. ಬೀದಿನಾಯಿ ಏಕಾಏಕಿ ಮೇಲೆರಗಿದ್ದರಿಂದ ವಿಚಲಿತವಾದ ಸಿಂಹಿಣಿ ಹೆದರಿ ಹಿಂದಕ್ಕೆ ಹೆಜ್ಜೆ ಹಾಕಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಾಸ್ವಾನ್ ಕೂಡ ಈ ವಿಡಿಯೋ ಹಂಚಿಕೊಂಡಿದ್ದು, ಬದುಕಿನಲ್ಲಿ ಇಂಥ ವಿಶ್ವಾಸ ಇರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಅಪರೂಪದ ದೃಶ್ಯ ಗುಜರಾತ್​ನ ಗಿರ್ ಅರಣ್ಯ ಪ್ರದೇಶದಲ್ಲಿ ಕಂಡುಬಂದಿತ್ತು.

    ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್​; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?

    ವಾಟ್ಸ್​ಆ್ಯಪ್​ ಪ್ರೈವೇಟ್​ ಗ್ರೂಪ್​ ಸೇರೋಕೆ ಗೂಗಲ್​ನಲ್ಲೇ ಲಿಂಕ್​! ತಪ್ಪು ಮಾಡಿ ತಿದ್ದಿಕೊಂಡ ವಾಟ್ಸ್​ಆ್ಯಪ್​

    ಅವನು ಕುಡಿದು ಬಂದು ತೆಗಿ ಅಂತ ಒತ್ತಾಯಿಸ್ತಿದ್ದ, ಇವನು ಜೀವವನ್ನೇ ತೆಗೆದ; ಕೊಲೆಯಲ್ಲಿ ಅಂತ್ಯವಾಯ್ತು ಸಲಿಂಗ ಕಾಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts