ಹುಚ್ಚರಯ್ಯ ಹುಚ್ಚರು ಹಾಸ್ಯ ನಾಟಕ ಪ್ರದರ್ಶನ ಶುಕ್ರವಾರ

drama
Published on

ಬೆಂಗಳೂರು: ಪಯಣ ತಂಡದ ಚೊಚ್ಚಲ ನಾಟಕ ‘ಹುಚ್ಚರಯ್ಯ ಹುಚ್ಚರು’ ಇದೇ ಏ.18ಕ್ಕೆ ಪ್ರದರ್ಶನ ಕಾಣಲಿದೆ. ಜಯನಗರದ ಯುವಪಥ ರಂಗಮಂದಿರದಲ್ಲಿ ಅಂದು ಸಂಜೆ 7.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. ಉತ್ತಮ ಜನಸ್ಪಂದನೆ ಹೊಂದಿರುವ ಈ ನಾಟಕ ಈಗಾಗಲೇ ಯಶಸ್ವಿ 29 ಪ್ರದರ್ಶನ ಕಂಡಿದೆ.

ಹಾಸ್ಯಪ್ರಧಾನವಾದ ನಾಟಕದ ಕಥೆಯಲ್ಲಿ ಬರುವ ಲೇಖಕರಿಗೆ ಕನ್ನಡಕ್ಕೆ 9ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಡಬೇಕೆಂಬ ಹಂಬಲ, ಇನ್ನು ಇವರ ಶಿಷ್ಯನದ್ದು, ಕೂಡಿ ಬರುವುದೋ ಕಂಕಣಬಲ ಎಂಬ ಗೊಂದಲ, ಈ ಈರ್ವರು ಸೇರಿ ಎದುರಿಸುವ ಕಿತಾಪತಿಗಳೇ ನಾಟಕದ ಕಥಾ ಹಂದರ.

ನಾಟಕಕ್ಕೆ ಮನೋಜ್ಞವಾದ ಸಂಗೀತ ಮತ್ತು ಹಾಡುಗಳನ್ನು ಅಳವಡಿಸಲಾಗಿದೆ. ಎಂ.ಆರ್.ಮನೋಜ್ ರಚನೆಯ ನಾಟಕವನ್ನು ಅರುಣ್ ಸೂರ್ಯ ನಿರ್ದೇಶಿಸಿದ್ದಾರೆ. ಶಶಾಂಕ ವಿ.ಚಿಣ್ಯ ಮತ್ತು ವರುಣ್ ವಿ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ದೂ : 8884822517 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net