

ವಿಜಯವಾಣಿ ಸುದ್ದಿಜಾಲ ಕಾರ್ಕಳ
ವಿದ್ಯೆ ಕಲಿತು ಕುಟುಂಬಕ್ಕೆ ಆಸರೆಯಾಗಬೇಕಾದ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ. ಆದರೆ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ಕುಟುಂಬ ಹಣ ಹೊಂದಾಣಿಸಲು ಅಶಕ್ತರಾಗಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಕಾರ್ಕಳ ತಾಲೂಕಿನ ಕೆದಿಂಜೆ ಸಮೀಪದ ಬೋಳ ಪುರ್ಲಡ್ಕ ಪರಾರಿ ನಿವಾಸಿ, ಮಂಜರಮಲ್ಕೆಯಲ್ಲಿ ಕೂಲಿ ಕಾರ್ಮಿಕರಾಗಿರುವ ರಾಜೇಶ್ ಶೆಟ್ಟಿ-ತ್ರಿವೇಣಿ ದಂಪತಿ ಕಿರಿಯ ಮಗ ರಿತಿಕ್ ಆರ್.ಶೆಟ್ಟಿ, ಬೆಳ್ಮಣ್ ಸಂತ ಜೋಸೆಫರ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾನೆ. ಬಾಲಕ ಪ್ರೈಮರಿ ಇಮ್ಯುನೊ ಡೆಫಿಸಿಯನ್ಸಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಕೂಡಲೇ ಅಸ್ತಿಮಜ್ಜೆ(ಬೋನ್ಮರೊವ್ ಟ್ರಾನ್ಸ್ಪ್ಲಾಂಟ್)ನೀಡುವ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಿತಿಕ್ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, 2016ರ ಜುಲೈಯಲ್ಲಿ ಸಾಲ ಮಾಡಿ ಹಾಗೂ ದಾನಿಗಳ ನೆರವಿನಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಓಪನ್ ಹಾರ್ಟ್ ಸರ್ಜರಿ ನಡೆಸಿದ್ದರು. ಬಳಿಕ ಕರುಳಿನಲ್ಲಿ ಕಲ್ಲುಗಡ್ಡೆಯಂತಿದ್ದು, ಚಿಕಿತ್ಸೆ ಮಾಡಿದರೂ, ಆಗಾಗ ನ್ಯುಮೋನಿಯಕ್ಕೆ ತುತ್ತಾಗುತ್ತಿದ್ದರಿಂದ ಬೆಂಗಳೂರಿನ ಮಕ್ಕಳ ತಜ್ಞರಲ್ಲಿ ಪರೀಕ್ಷಿಸಿದಾಗ ಇಮ್ಯುನೊ ಡೆಫಿಸಿಯನ್ಸಿ ಎಂಬ ಕಾಯಿಲೆ ಇರುವುದು ದೃಢಪಟ್ಟಿತ್ತು. ಅಸ್ತಿಮಜ್ಜೆ ಶಸ್ತ್ರಚಿಕಿತ್ಸೆ ಕೂಡಲೇ ನಡೆಯಬೇಕಿದ್ದು, 43 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ದಿಕ್ಕೇ ಕಾಣದಂತಾಗಿರುವ ಕುಟುಂಬ ಸಹೃದಯಿ ದಾನಿಗಳಿಂದ ನೆರವು ಯಾಚಿಸಿದ್ದಾರೆ.
ನೆರವು ನೀಡುವವರು ತ್ರಿವೇಣಿ ಅವರ ಸಚ್ಚೇರಿಪೇಟೆ ಶಾಖೆಯ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0646101014035 (ಐಎಫ್ಎಸ್ಸಿ ಕೋಡ್-ಸಿಎನ್ಆರ್ಬಿ0000646) ಧನ ಸಹಾಯ ಮಾಡಬಹುದು. ಮೊಬೈಲ್- 7349269037 ಸಂಪರ್ಕಿಸಬಹುದು.