ಮಲ್ಲಯಬೆಟ್ಟುವಿನಲ್ಲಿ ಚಿರತೆ ಪ್ರತ್ಯಕ್ಷ

cheetha
ಹಾಳೆಕಟ್ಟೆ ಸಮೀಪದ ಕಲ್ಯಾ ಮಲ್ಲಯಬೆಟ್ಟು ಎಂಬಲ್ಲಿ ಬುಧವಾರ ಹಾಡಹಗಲೇ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ
Published on

ಕಾರ್ಕಳ: ಇಲಿನ ಹಾಳೆಕಟ್ಟೆ ಸಮೀಪದ ಕಲ್ಯಾ ಮಲ್ಲಯಬೆಟ್ಟು ಎಂಬಲ್ಲಿ ಬುಧವಾರ ಹಾಡಹಗಲೇ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ.
ಕಾರಿನಲ್ಲಿ ಹೋಗುತ್ತಿದ್ದ ಯುವಕರ ತಂಡ ಚಿರತೆಯ ವಿಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲವು ಸಮಯಗಳಿಂದ ಈ ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವ ಬಗ್ಗೆ ಹಾಗೂ ಸಾಕುಪ್ರಾಣಿಗಳು ಕಾಣೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿತ್ತು. ಇದೀಗ ಹಾಡಹಗಲೇ ಚಿರತೆ ರಾಜಾರೋಷವಾಗಿ ಓಡಾಡುತ್ತಿದ್ದುದು ಪತ್ತೆಯಾದುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net