ಮನೆಯಲ್ಲಿದ್ದವರ ಕೈ-ಕಾಲು ಕಟ್ಟಿ ಹಾಕಿ ದರೋಡೆ; ಎಸ್ಕೇಪ್​ ಆಗುವಾಗ ಖದೀಮರು ಹೇಳಿದ ಮಾತಿಗೆ ಬೆಚ್ಚಿ ಬಿದ್ದ ಮಹಿಳೆಯರು!

robbery
Published on

ಹೊಸಕೋಟೆ: ದರೋಡೆಕೋರರ ಗುಂಪೊಂದು ಮನೆಯಲ್ಲಿದ್ದವರ ಕೈ-ಕಾಲು ಕಟ್ಟಿ ಹಾಕಿ, ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರದ ಯಲ್ಲಮ್ಮ ಶರಾಬ್ ಮುನಿಶಾಮಯ್ಯ ಬಡಾವಣೆಯ ಕಣ್ಣೂರಹಳ್ಳಿ ರಸ್ತೆಯಲ್ಲಿ ನಡೆದಿದೆ.

ಮನೆ ಮಾಲೀಕ ವಿನೋದ್ ಕೆಲಸಕ್ಕೆ ಹೋದ ಬಳಿಕ ಮನೆಗೆ ನುಗ್ಗಿರುವ ಖದೀಮರು, ವಿನೋದ್ ಪತ್ನಿ ಸೌಂದರ್ಯ ಹಾಗೂ ತಾಯಿ ಬಸಮ್ಮಳನ್ನ ಕಟ್ಟಿ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ ಸುಮಾರು 200 ಗ್ರಾಂ ಚಿನ್ನಾಭರಣ ಹಾಗು 2 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ 5:30 ರ ಸಮಯದಲ್ಲಿ ಘಟನೆ ನಡೆದಿದ್ದು, ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಖದೀಮರು ಬೆದರಿಕೆ ಹಾಕಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net