

ಬೆಳ್ತಂಗಡಿ: ಉಜಿರೆ ಸಂತ ಅಂತೋನಿ ಚರ್ಚ್ ಮುಂದಾಳುತ್ವದಲ್ಲಿ ನಿರ್ಮಾಣಗೊಂಡ ಹೊಸ ಮನೆಯ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂತ ಅಂತೋನಿ ಚರ್ಚ್ ಧರ್ಮಗುರು ಅಬೆಲ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ ಸ್ಥಾಪಕ ರೋಶನ್ ಡಿಸೋಜ, ಉಜಿರೆ ಗ್ರಾಪಂ ಅಧ್ಯಕ್ಷ ಉಷಾಕಿರಣ್ ಕಾರಂತ್, ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಿಜಯ್ ಲೋಬೋ, ದಯಾ ವಿಶೇಷ ಶಾಲೆಯ ಧರ್ಮಗುರು ವಿನೋದ್ ಮಸ್ಕರೇನಸ್, ಕಾಪುಚಿನ್ ಆಶ್ರಮ ದಯಾಳ್ ಭಾಗ್ ಧರ್ಮಗುರು ಎಡ್ಡಿನ್ ಲೋಬೋ, ಕಾನ್ವೆಂಟ್ ಸುಪೀರಿಯರ್ ನ್ಯಾನ್ಸಿ ಡಯಾಸ್, ಫಲಾನುಭವಿ ರೋಜಿ ಪಾಯ್ಸ ಕುಟುಂಬಸ್ಥರು ಉಪಸ್ಥಿತರಿದ್ದರು.
ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೊನಿ ಫನಾರ್ಂಡಿಸ್ ನೇತೃತ್ವದಲ್ಲಿ ಚರ್ಚ್‌ನ ಎಲ್ಲ್ಲ ಸಂಘಟನೆಗಳು ಹಾಗೂ ಮಕಲ್ ಡಿಸೋಜ ಪುತ್ತೂರು ಮತ್ತು ದಾನಿಗಳ ನೆರವಿನೊಂದಿಗೆ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಲಾಗಿದೆ. ಇದು 5ನೇ ಯೋಜನೆಯಾಗಿದ್ದು ಇದುವರೆಗೆ ಸುಮಾರು 37 ಲಕ್ಷ ರೂ. ವೆಚ್ಚದಲ್ಲಿ ಮೂರು ಮನೆಗಳ ನವೀಕರಣ ಹಾಗೂ 2 ಹೊಸ ಮನೆ ನಿರ್ಮಿಸಿ ಕೊಡಲಾಗಿದೆ.
ಪಾಲನಾ ಮಂಡಳಿ ಕಾರ್ಯದರ್ಶಿ ಲಿಗೋರಿ ವಾಸ್ ಸ್ವಾಗತಿಸಿದರು. ಸಂಯೋಜಕಿ ಲವೀನಾ ಫನಾರ್ಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಸಂತ ಲಾರೆನ್ಸ್ ವಾಳೆಯ ಗುರಿಕಾರರು ಮನೆ ಆಶೀರ್ವಚನದ ಪ್ರಾರ್ಥನೆ ಮಾಡಿದರು.