ಕೋಟ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸಾಸ್ತಾನ ಸಮೀಪ ಕೋಡಿ ಕನ್ಯಾಣದ ರಾಜೀವ ಕೆ. ಅವರಿಗೆ ಸೇರಿದ ಬೋಟ್ ಗುರುವಾರ ಉತ್ತರ ಕನ್ನಡ ಹೊನ್ನಾವರದಲ್ಲಿ ಮುಳುಗಡೆಯಾಗಿದೆ. ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‌ನ ಅಡಿಭಾಗಕ್ಕೆ ಯಾವುದೋ ವಸ್ತು ತಾಗಿ ಹಾನಿಯಾಗಿದೆ. ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇನ್ನೆರಡು ಬೋಟ್‌ಗಳು ನೆರವಿಗೆ ಬಂದಿವೆ. ಬೋಟ್‌ನಲ್ಲಿದ್ದ ಮೀನುಗಾರರನ್ನು ರಕ್ಷಿಸಲಾಗಿದೆ. ನೀರಿನ ಒತ್ತಡ ಹೆಚ್ಚಿದ್ದುದರಿಂದ ಬೋಟ್ ದಡಕ್ಕೆ ತರುವ ಪ್ರಯತ್ನ ವಿಫಲವಾಗಿದೆ ಎಂದು ಬೋಟ್ ಮಾಲೀಕ ರಾಜೀವ ಕೆ. ತಿಳಿಸಿದ್ದಾರೆ.