ಆರೋಗ್ಯವಂತರಾಗಿದ್ದರೆ ಸಾಧನೆ ಸುಲಭ...

1
Published on

ಶಾಸಕ ಯಶ್​ಪಾಲ್​ ಅಭಿಪ್ರಾಯ

'ಉಡುಪಿ ಮ್ಯಾರಥಾನ್​' ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಾರೇ ಆದರೂ ಜೀವಿತಾವಧಿಯಲ್ಲಿ ಸಾಧನೆ ಮಾಡಲು ಮೊದಲು ಆರೋಗ್ಯವಂತರಾಗಿರಬೇಕು. ಆ ಕಲ್ಪನೆಯೊಂದಿಗೆ ಉಡುಪಿಯ ರನ್ನರ್ಸ್​ ಕ್ಲಬ್​ನವರು 3 ವರ್ಷದಿಂದ ಮ್ಯಾರಥಾನ್​ ಆಯೋಜಿಸುತ್ತಿದ್ದು, ಯುವ ಸಮುದಾಯದಲ್ಲಿ ಕ್ರೀಡಾ ಮನೋಭಾವ ಮೂಡಿಸುತ್ತಿದ್ದಾರೆ. ಅಲ್ಲದೆ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಉಡುಪಿ ರನ್ನರ್ಸ್​ ಕ್ಲಬ್​ ವತಿಯಿಂದ ಹಾಗೂ ಉಡುಪಿಯ ಸಿಎಸ್​ಐ ಲೋಂಬಾರ್ಡ್​ ಹಾಸ್ಪಿಟಲ್​ (ಮಿಷನ್​ ಆಸ್ಪತ್ರೆ) ಆಶ್ರಯದಲ್ಲಿ ಮಲ್ಪೆಯ ಸೀವಾಕ್​ನಲ್ಲಿ ಭಾನುವಾರ ಆಯೋಜಿಸಿದ್ದ ಉಡುಪಿ ಮ್ಯಾರಥಾನ್​ ಕಾರ್ಯಕ್ರಮದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

2

ಅದಾನಿ ಗ್ರೂಪ್​ ನಿರ್ದೇಶಕ ಕಿಶೋರ್​ ಆಳ್ವ, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್​, ಉದ್ಯಮಿ ಆನಂದ್​ ಸುವರ್ಣ, ಉಡುಪಿ ಕೊಚ್ಚಿನ್​ ಶಿಪ್​ ಯಾರ್ಡ್​ನ ಸಿಇಒ ಹರಿಕುಮಾರ್​, ಡಿಜಿಎಂ. ಎಂ.ಅಂಬಲವನಮ್​, ರನ್ನರ್ಸ್​ ಕ್ಲಬ್​ ಅಧ್ಯಕ್ಷ ಡಾ. ತಿಲಕ್​ ಚಂದ್ರಪಾಲ್​, ಯುವಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್​ ಶೆಟ್ಟಿ, ಉಡುಪಿ ರನ್ನರ್ಸ್​ ಕ್ಲಬ್​ ಪದಾಧಿಕಾರಿಗಳಾದ ದಿವಾಕರ್​ ಗಣಪತಿ ನಾಯಕ, ಸತೀಶ್​ ಸಾಲ್ಯಾನ್​, ಉದಯಕುಮಾರ್​ ಶೆಟ್ಟಿ, ದಿವೇಶ್​ ಶೆಟ್ಟಿ, ಯತೀಶ್​ ಇತರರಿದ್ದರು.

ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಆರೋಗ್ಯವಂತ ಸಮಾಜಕ್ಕಾಗಿ ಆಯೋಜನೆ

ಮಿಷನ್​ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್​ ಜತ್ತನ್ನ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ$್ಯ ಕಾಪಾಡುವ ಉದ್ದೇಶದಿಂದ ಮ್ಯಾರಥಾನ್​ ಆಯೋಜಿಸಲಾಗಿದೆ. ಪ್ರಸ್ತುತ ಜನಜೀವನದಲ್ಲಿ ಹೆಚ್ಚಿನ ಜನರಲ್ಲಿ ಹೃದಯಾಘಾತ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಅಂತಹ ದುರಂತಕ್ಕೆ ಕಡಿವಾಣ ಹಾಕಲು ಆರೋಗ್ಯವಂತ ಸಮಾಜ ನಿಮಾರ್ಣವಾಗಬೇಕಿದೆ. ದೇಶ&ವಿದೇಶದ ಪ್ರವಾಸೋದ್ಯಮದಲ್ಲಿ ಉಡುಪಿಯ ಮಲ್ಪೆ ಹೆಸರು ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿವರ್ಷ ಡಿ. 1ರಂದು ಮ್ಯಾರಥಾನ್​ ನಡೆಯಬೇಕು. ಆ ದಿನವನ್ನು ನಮ್ಮ ವಾರ್ಷಿಕ ಕ್ಯಾಲೆಂಡರ್​ನಲ್ಲೂ ಪ್ರಕಟವಾಗುವಂತಾಗಬೇಕು ಎಂದರು.

ಮಲ್ಪೆಯ ಸೀ ವಾಕ್​ನಲ್ಲಿ ಉದ್ಘಾಟನೆ

ಭಾನುವಾರ ನಸುಕಿನ 5 ಗಂಟೆಗೆ ಮಲ್ಪೆಯ ಸೀ ವಾಕ್​ನಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಮ್ಯಾರಥಾನ್​ಗೆ ಚಾಲನೆ ನೀಡಿದರು. ಪುರುಷ ಮತ್ತು ಮಹಿಳೆಯರಿಗೆ 21 ಕಿಮೀ, 10 ಕಿಮೀ, 5 ಕಿಮೀ, ಉಡುಪಿಯ ಶಾಲಾ ವಿದ್ಯಾರ್ಥಿಗಳಿಗೆ 5 ಮತ್ತು 3 ಕಿಮೀ ಮೋಜಿನ ಓಟ ಆಯೋಜಿಸಲಾಗಿತ್ತು. 21 ಕಿಮೀಯಲ್ಲಿ 250 ಮಂದಿ, 10 ಕಿಮೀಯಲ್ಲಿ 750, 5 ಕಿಮೀಯಲ್ಲಿ 850 ಮಂದಿ, ವಿದ್ಯಾರ್ಥಿಗಳ 5 ಮತ್ತು 3 ಕಿಮೀಯಲ್ಲಿ 1,050 ಮತ್ತು ನಗರ ರನ್​ನಲ್ಲಿ 525 ಮಂದಿ ಪಾಲ್ಗೊಂಡಿದ್ದರು. ರಾಜ್ಯ, ಹೊರರಾಜ್ಯದ ಅಬಾಲ ವೃದ್ಧರಾದಿಯಾಗಿ 3,500 ಕ್ಕೂ ಅಧಿಕ ಓಟಗಾರರು ಪಾಲ್ಗೊಂಡಿದ್ದರು. ಇಥಿಯೋಪಿಯಾ, ಕೀನ್ಯಾ, ಜರ್ಮನ್​, ಉಗಾಂಡದ ಅಂತಾರಾಷ್ಟ್ರೀಯ ಓಟಗಾರರೂ ಭಾಗವಹಿಸಿದ್ದರು.

3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net