

| ಮಂಜುನಾಥ ಕೆ. ಬೆಂಗಳೂರು
ಚುಕುಬುಕು ರೈಲು ನೀವು ಕುಳಿತ ಟೇಬಲ್ಗೇ ಬಂದು ಆಹಾರ ಸರಬರಾಜು ಮಾಡುತ್ತದೆ ಎಂದರೆ ನಂಬುತ್ತೀರಾ?
ರಾಜರಾಜೇಶ್ವರಿನಗರದ ವೈಜಿಆರ್ ಸಿಗ್ನೇಚರ್ ಮಾಲ್ನಲ್ಲಿ ಆರಂಭವಾಗಿರುವ ‘ಪ್ಲಾಟ್ಫಾರ್ಮ್-65’ ರೆಸ್ಟೋರೆಂಟ್ನಲ್ಲಿ ವಿದ್ಯುತ್ಚಾಲಿತ ಪುಟಾಣಿ ರೈಲುಗಳು ಆರ್ಡರ್ ಮಾಡಿದ ಆಹಾರವನ್ನು ಗ್ರಾಹಕರಿದ್ದಲ್ಲಿಗೇ ಹೊತ್ತುಬರುವ ಮೂಲಕ ಬೆರಗು ಮೂಡಿಸುತ್ತವೆ. ಆಹಾರ ಸರ್ವ್ ಮಾಡಿದ ನಂತರ ಮರಳುತ್ತವೆ.
ವಿನೂತನ ಪರಿಕಲ್ಪನೆಯಲ್ಲಿ ಆರಂಭವಾಗಿರುವ ಈ ವಿಶೇಷ ರೆಸ್ಟೋರೆಂಟ್ಗೆ ಸಹಜವಾಗಿಯೇ ಪಾಲಕರು ತಮ್ಮ ಮಕ್ಕಳೊಂದಿಗೆ ‘ದಾಳಿ’ ಇಡುತ್ತಾರೆ. ರೆಸ್ಟೋರೆಂಟ್ನಲ್ಲಿ 10 ಟ್ರ್ಯಾಕ್ಗಳಿದ್ದು, ಬಗೆಬಗೆಯ ರೈಲುಗಳಿವೆ. ಕಿಚನ್ನಿಂದ ಇವುಗಳನ್ನು ನಿಯಂತ್ರಿಸಲಾಗುತ್ತದೆ. ರೈಲಿನ ಬೋಗಿಗಳ ಮೇಲೆ ಆಹಾರ ಪದಾರ್ಥಗಳನ್ನಿಟ್ಟು ಗುಂಡಿ ಒತ್ತಿದರೆ ಸಾಕು, ನೇರವಾಗಿ ಗ್ರಾಹಕರಿರುವ ಟೇಬಲ್ ಮಧ್ಯಭಾಗದಲ್ಲಿ ಬಂದು ನಿಲ್ಲುತ್ತದೆ. ಪ್ರತಿ ಟೇಬಲ್ಗೆ ಒಂದೊಂದು ಹೆಸರು ಕೊಡಲಾಗಿದೆ. ಸೆನ್ಸರ್ ಆಧಾರಿತ ತಂತ್ರಜ್ಞಾನದಿಂದ ಈ ರೈಲುಗಳನ್ನು ನಿರ್ವಹಿಸಲಾಗುತ್ತದೆ.
ಬಗೆಬಗೆಯ ತಿನಿಸುಗಳು: ದಕ್ಷಿಣ ಭಾರತ, ಉತ್ತರ ಭಾರತ ಶೈಲಿಯ ತಿನಿಸುಗಳು, ಚೈನೀಸ್, ತಂದೂರಿ ಸೇರಿ ಹಲವು ಬಗೆಯ ಆಹಾರ ಪದಾರ್ಥಗಳು ಲಭ್ಯವಿದೆ. ಹೈದರಾಬಾದ್ ಧಮ್ ಬಿರಿಯಾನಿ, ಫ್ಲಾಟ್ಫಾಮ್ರ್-65 ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಫಲಾವ್, ಫ್ರೖೆಡ್ ಚಿಕನ್ ಪಲಾವ್, ರಾಯಲವಾರಿ ಕೋಡಿ ವೇಪುಡು (ಚಿಕನ್ ಪ್ರೖೆ), ಕೋನಸೀಮ ಕೋಡಿ ಪಕೋಡಿ (ಚಿಕನ್), ಸೂಪ್ ಸೇರಿ ಹಲವು ಬಗೆಯ ರುಚಿಕರವಾದ ಮಾಂಸಾಹಾರಗಳಿವೆ. ವೆಚ್ ಧಮ್ ಬಿರಿಯಾನಿ, ಉಲವಚಾರು ವೆಚ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಖಾಜೂ ಬಿರಿಯಾನಿ, ಹಲವು ಬಗೆಯ ಹಣ್ಣಿನ ರಸ, ಐಸ್ಕ್ರೀಮ್ ಮತ್ತು ಕೇಕ್ಗಳು ಲಭ್ಯವಿವೆ. ಜತೆಗೆ ಕೇಟರಿಂಗ್ ಕೂಡ ತೆಗೆದುಕೊಳ್ಳಲಾಗುತ್ತದೆ.
ಹತ್ತಿರದಲ್ಲಿ ಚೆನ್ನಾಗಿರುವ ರೆಸ್ಟೋರೆಂಟ್ ಯಾವುದಿದೆ ಎಂದು ಸ್ನೇಹಿತೆಯನ್ನು ಕೇಳಿದ್ದಾಗ ‘ಪ್ಲಾಟ್ಫಾಮ್ರ್-65’ ಬಗ್ಗೆ ಹೇಳಿದ್ದಳು. ನಿಜಕ್ಕೂ ಈ ರೆಸ್ಟೋರೆಂಟ್ ತುಂಬ ಚೆನ್ನಾಗಿದೆ. ಇಲ್ಲಿನ ಸಿಬ್ಬಂದಿ ಉತ್ತಮವಾಗಿ ಸರ್ವೀಸ್ ನೀಡುತ್ತಾರೆ. | ಸಂಧ್ಯಾ, ಗ್ರಾಹಕಿ ನಮ್ಮ ರೆಸ್ಟೋರೆಂಟ್ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಆರ್.ಆರ್. ನಗರದಲ್ಲಿ 2ನೇ ಶಾಖೆಯನ್ನು ತೆರೆಯ ಲಾಗಿದೆ. ಶೀಘ್ರದಲ್ಲಿ ನಗರದಲ್ಲಿ ಮತ್ತೆರಡು ಶಾಖೆಯನ್ನು ತೆರೆದು ಗ್ರಾಹಕರಿಗೆ ಉತ್ತಮ ಸರ್ವೀಸ್ ಕೊಡುತ್ತೇವೆ. | ಆಸಿಫ್, ರೆಸ್ಟೋರೆಂಟ್ನ ಮ್ಯಾನೇಜರ್
ಇಲ್ಲಿದೆ ಹೊಟೇಲ್: ಪ್ಲಾಟ್ಫಾರ್ಮ್ 65, ವೈಜಿಆರ್ ಸಿಗ್ನೇಜರ್ ಮಾಲ್ನ 2ನೇ ಮಹಡಿ, ಡಬಲ್ ರಸ್ತೆ, ರಾಜರಾಜೇಶ್ವರಿನಗರ, ಹಲಗೆವಡೇರಹಳ್ಳಿ ವಿಲೇಜ್, ಬೆಂಗಳೂರು- 98
ಸಮಯ: ಬೆಳಗ್ಗೆ 11ರಿಂದ ರಾತ್ರಿ 11. ವಾರಾಂತ್ಯದಲ್ಲಿ 11.30.
ದೂ: 90350 05999