More

    ಯಾವುದಕ್ಕೂ ನಾಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದಾ?; ವ್ಯಕ್ತಿಯೊಬ್ಬರಿಂದ ಆತಂಕಕಾರಿ ಪೋಸ್ಟ್​!

    ಬೆಂಗಳೂರು: ಸಾಮಾನ್ಯವಾಗಿ ಅಮಾವಾಸ್ಯೆ ದಿನ ಏನಾದರೂ ಕೆಟ್ಟದ್ದಾಗುವ ಸಾಧ್ಯತೆ ಇರುತ್ತದೆ. ಮಾಟ-ಮಂತ್ರ, ವಾಮಾಚಾರದಂಥ ಪ್ರಯೋಗ ಮಾಡುವ ಕೆಲವರು ಅದಕ್ಕೂ ಸಾಮಾನ್ಯವಾಗಿ ಅಮಾವಾಸ್ಯೆಯ ಇರುಳನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ.

    ಇದನ್ನೂ ಓದಿ: ಮಹಾಲಯ ಅಮಾವಸ್ಯೆ ದಿನದಂದೇ ಭೀಕರ ಅಪಘಾತ: ಎಎಸ್​ಐ ಪತ್ನಿ-ಮಗಳು ಸೇರಿ ನಾಲ್ವರು ದುರ್ಮರಣ

    ‘ನಾಳೆ ಯಾವುದಕ್ಕೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು’ ಎಂಬಂತೆ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದು, ಕಾಕತಾಳೀಯ ಎಂಬಂತೆ ನಾಳೆ ಅಮಾವಾಸ್ಯೆಯೂ ಆಗಿರುವುದರಿಂದ ಈಗ ಆ ಪೋಸ್ಟ್​ ಬಹಳಷ್ಟು ಪ್ರತಿಕ್ರಿಯೆ ಪಡೆಯಲಾರಂಭಿಸಿದೆ.

    ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ದಿನವೇ ದುರಂತ: ತಾಯಿ-ಮಗ ಕಾರಿನಲ್ಲೇ ಸಾವು

    2023ರ ಅಕ್ಟೋಬರ್ 14ರಂದು ಭಾರತದಲ್ಲಿನ ಜನಸಂದಣಿಯ ಸ್ಥಳಕ್ಕೆ ಹೋಗುವುದನ್ನೂ ಆದಷ್ಟೂ ತಪ್ಪಿಸಿ. ಅದರಲ್ಲೂ ವಿಶೇಷವಾಗಿ ಪ್ರಮುಖ ಮಹಾನಗರಗಳಲ್ಲಿ ಎಂದಿರುವ ಆ ವ್ಯಕ್ತಿ, ಉಗ್ರರ ದಾಳಿ, ಕೋಮುಗಲಭೆ ಸಂಭವಿಸುವ ಸಾಧ್ಯತೆ ಇದೆ, ಜನರು ಎಚ್ಚರಿಕೆಯಿಂದಿರಿ ಎಂದು ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ರಾತ್ರಿ ಹಳೇ ಮನೆ ಬಳಿ ಜವರಾಯನಂತೆ ಬಂದ ಮಳೆರಾಯ 7 ಜನರ ಪ್ರಾಣ ಹೊತ್ತೊಯ್ದ!

    ತನ್ನ ಬಯೋದಲ್ಲಿ ಡೆವಿಲ್ ಆಸ್ಟ್ರಾಲಜರ್ ಎಂದು ಬರೆದುಕೊಂಡಿರುವ ಪ್ರಶಾಂತ್ ಕಿಣಿ ಎಂಬ ಈ ವ್ಯಕ್ತಿಯ ಪೋಸ್ಟ್​ ಆತಂಕಕಾರಿಯಾಗಿದ್ದು, ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿ ಆತಂಕ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.

    ಮಂಚದಡಿಯಲ್ಲಿ ಕೋಟಿಗಟ್ಟಲೆ ಹಣ!; ತಿರುಗುಬಾಣ ಆಗಲಿದೆಯೇ 40% ಕಮಿಷನ್ ಪ್ರಕರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts