ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ದಂಪತಿ: ಡೆತ್​ನೋಟ್​ನಲ್ಲಿ ಕ್ಷಮೆಯಾಚನೆ..!

Couple
Published on

ಹೊಸಪೇಟೆ( ಬಳ್ಳಾರಿ): ಮಕ್ಕಳಿಗೆ ವಿಷವುಣಿಸಿ ದಂಪತಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ನಡೆದಿದೆ.

ನಂಜುಂಡೇಶ್ಚರ(32), ಪತ್ನಿ ಪಾರ್ವತಿ ಹಾಗೂ ಮಕ್ಕಳಾದ ಗೌತಮಿ (3), ಸ್ವರೂಪ್ (2) ಮೃತಪಟ್ಟಿದ್ದಾರೆ. ನಂಜುಂಡೇಶ್ವರ ಜಿಂದಾಲ್ ಕಂಪನಿಯ ನೌಕರರರಾಗಿದ್ದರು. ಡೆತ್​ನೋಟ್ ಬರೆದಿಟ್ಟು, ಮಕ್ಕಳಿಗೆ ವಿಷವುಣಿಸಿ, ದಂಪತಿಗಳಿಬ್ಬರು ನೇಣು ಬೀಗಿದುಕೊಂಡು ಮೃತಪಟ್ಟಿದ್ದಾರೆ.

ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಡೆತ್​ನೋಟ್​ನಲ್ಲಿ ನಮ್ಮ ಸಾವಿಗೆ ನಾವೇ ಕಾರಣರಾಗಿದ್ದು, ಯಾರು ಜವಬ್ದಾರರಲ್ಲ ಎಂದು ಬರೆದಿದ್ದಾರೆ. ಅಲ್ಲದೆ, ನಮ್ಮಿಂದ ಯಾರಿಗಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಘಟನಾ ಸ್ಥಳಕ್ಕೆ ಗಾದಿಗನೂರು ಠಾಣಾ ಪೊಲೀಸರು ಭೇಟಿ ನೀಡಿವ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net