ಬೆಂಗಳೂರಿನಲ್ಲಿ ಮತ್ತೊಂದು ಭೀಕರ-ಸರಣಿ ಅಪಘಾತ; ಬೆಂಜ್ ಸೇರಿ 4 ಕಾರು ಜಖಂ, ಒಂದಂತೂ ಅಪ್ಪಚ್ಚಿ, ಒಬ್ಬನ ಸಾವು..

Feature
ಜಖಂಗೊಂಡ ಕಾರು ತೆರವುಗೊಳಿಸುತ್ತಿರುವ ಪೊಲೀಸರು ಮತ್ತು ಅಪ್ಪಚ್ಚಿ ಆದ ಕಾರಿನ ಸಮೀಪ ನೋಟ..
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಈ ಸರಣಿ ಅಪಘಾತದಲ್ಲಿ ಬೆಂಜ್ ಸೇರಿ ನಾಲ್ಕು ಕಾರು, ಒಂದು ಆಟೋ ಕೂಡ ಒಳಗೊಂಡಿದ್ದು, ಆಟೋ ಹಾಗೂ ಕಾರುಗಳು ಜಖಂಗೊಂಡಿವೆ. ಅದರಲ್ಲೂ ಒಂದು ಕಾರಂತೂ ಅಪ್ಪಚ್ಚಿ ಅನ್ನೋ ಥರ ಆಗಿದೆ.

ಬೆಂಗಳೂರಿನ ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಸರಣಿ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳಕ್ಕೆ ಹಲಸೂರು ಸಂಚಾರ ಠಾಣೆ ಪೊಲೀಸರು ಧಾವಿಸಿ ತುರ್ತು ಕ್ರಮ ಕೈಗೊಂಡಿದ್ದಾರೆ.

ವಾಹನದಲ್ಲಿದ್ದು ಗಂಭೀರಗೊಂಡು ರಕ್ತಸಿಕ್ತವಾಗಿರುವವರನ್ನು ಪೊಲೀಸರು ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದು, ಜಖಂಗೊಂಡಿರುವ ವಾಹನಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ವಾಹನ ಹಾಗೂ ಅದರಲ್ಲಿದ್ದವರ ಮತ್ತು ಸಾವಿಗೀಡಾದ ವ್ಯಕ್ತಿಯ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಸಾವಿಗೀಡಾದ ವ್ಯಕ್ತಿಯ ಹೆಸರು ಹರಿ ಮಹಾಂತ ಎಂಬುದಷ್ಟೇ ಸದ್ಯಕ್ಕೆ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net