

ಬೆಳ್ತಂಗಡಿ: ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಯಕ್ಷಗಾನ ಕಲಾವಿದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಳಿತ್ತಡಿ ಲಕ್ಷ್ಮಣ ಗೌಡ, ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ, ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ದೇವಪ್ಪ ಎಂ.ಕೆ. ಮತ್ತು ಕಾಷ್ಠ ಶಿಲ್ಪಿ ಶಶಿಧರ ಆಚಾರ್ಯ ಮಾಯಾ ಅವರನ್ನು ಸನ್ಮಾನಿಸಲಾಯಿತು.
ತಂತ್ರಿ ಅಲಂಬಾಡಿ ಪದ್ಮನಾಭ ತಂತ್ರಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್.ಪದ್ಮ ಗೌಡ ಸನ್ಮಾನ ನೆರವೇರಿಸಿದರು. ಆನುವಂಶಿಕ ಆಡಳಿತ ಮೊಕ್ತೇಸರ ಮಾಯ ಗುತ್ತು ಪುಷ್ಪದಂತ ಜೈನ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಾಮೋದರ ಗೌಡ ಸುರುಳಿ, ದಯಾನಂದ ಪಿ.ಬೆಳಾಲು, ರಾಜಪ್ಪ ಗೌಡ ಪುಚ್ಚೆಹಿತ್ಲು, ಸುರೇಶ್ ಭಟ್ ಪರಂಗಜೆ, ದಿನೇಶ ಎಂ.ಕೆ, ವಾರಿಜಾ ಗುಂಡ್ಯ, ಕವಿತಾ ಉಮೇಶ್ ಮಂಜೊತ್ತು ಉಪಸ್ಥಿತರಿದ್ದರು. ಶಿಕ್ಷಕರಾದ ಧರ್ಮೇಂದ್ರ ಕುಮಾರ್ ಮತ್ತು ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.