ಕಾನೂನು ಅರಿವು ಎಲ್ಲರಲ್ಲಿರಲಿ : ಮುರಳೀಧರ ಕೋಟ್ಯಾನ್ ಅನಿಸಿಕೆ

50
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮಹಿಳೆಯರನ್ನು ನಾವು ಸದಾ ಗೌರವಿಸಬೇಕು. ಸಾಧಕ ಮಹಿಳೆಯರನ್ನು ಸಮಾಜದಲ್ಲಿ ಗುರುತಿಸುವುದು ಮುಖ್ಯ. ಸಾಮಾಜಿಕ ಕಳಕಳಿ ಜತೆ ಕಾನೂನಿನ ಅರಿವು ಎಲ್ಲರಲ್ಲಿರಬೇಕು ಎಂದು ಯುವವಾಹಿನಿ ಮೂಡುಬಿದಿರೆ ಘಟಕ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಹೇಳಿದರು.

ಯುವವಾಹಿನಿ ಮೂಡುಬಿದಿರೆ ಘಟಕ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕಡಂದಲೆ- ಪಾಲಡ್ಕ ಹಾಗೂ ಮಹಿಳಾ ಘಟಕ ಸಹಯೋಗದೊಂದಿಗೆ ಮಹಿಳಾ ದಿನಾಚರಣೆ ಅಂಗವಾಗಿ ಪಾಲಡ್ಕದಲ್ಲಿ ‘ಸಮರ್ಪಣೆ’ ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಶಾಂತಿ ಶೇಖರ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಜೆ. ಆಂಗ್ಲ ಮಾಧ್ಯಮ ಶಾಲೆ ಸಹಶಿಕ್ಷಕಿ ಶೋಭಾ ಸುರೇಶ್ ಮಹಿಳೆಯರಲ್ಲಿ ಸಂಸ್ಕಾರ-ಸಂಸ್ಕೃತಿ ಕುರಿತು ಹಾಗೂ ವಕೀಲೆ ಮೇಘರಾಣಿ ಕಾನೂನು ಮಾಹಿತಿ ನೀಡಿದರು.

ಕಡಂದಲೆ ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಲೀಲಾಧರ, ಯುವವಾಹಿನಿ ಕೇಂದ್ರ ಸಮಿತಿ ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರ, ಮೂಡುಬಿದಿರೆ ಘಟಕ ಮಹಿಳಾ ನಿರ್ದೇಶಕಿ ಶೋಭಾ ದಿನೇಶ್, ಪಾವನ ಸಂತೋಷ್ ಸಾಲ್ಯಾನ್, ಕಾರ್ಯದರ್ಶಿ ವಿನೀತ್ ಸುವರ್ಣ, ಕೋಶಾಧಿಕಾರಿ ಅಕ್ಷತಾ ಮಾರೂರು, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕ ಕಡಂದಲೆ- ಪಾಲಡ್ಕ ಕಾರ್ಯದರ್ಶಿ ಉದಯ್, ಕೋಶಾಧಿಕಾರಿ ಶರ್ಮಿಳಾ ಉಪಸ್ಥಿತರಿದ್ದರು.

ಕಡಂದಲೆ- ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕ ಅಧ್ಯಕ್ಷೆ ಸೌಮ್ಯಾ ಗಣೇಶ್ ಸ್ವಾಗತಿಸಿದರು. ಅಕ್ಷತಾ ಮಾರೂರು ವಂದಿಸಿದರು. ಜಾನಕಿ ವಸಂತ್ ನಿರೂಪಿಸಿದರು.

ಸಾಧಕಿಯರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಅನಿತಾ ಮುಂಡ್ರೊಟ್ಟು, ಶೋಭಾ ಬೆಳುವಾಯಿ, ಸುಜಾತಾ, ಶಾರದಾ, ಕಸ್ತೂರಿ, ಪವಿತ್ರಾ, ಪದ್ಮಾವತಿ, ಕವಿತಾ ಹಾಗೂ ಪಾಲಡ್ಕ ಗ್ರಾಪಂ ಘನತ್ಯಾಜ್ಯ ನಿರ್ವಹಣಾ ವಾಹನದ ಚಾಲಕಿ ಭಾರತಿ ಮತ್ತು ಸಹಾಯಕಿ ವಿಮಲಾ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net