

ಗಂಗೊಳ್ಳಿ: ಗ್ರಾಮದಲ್ಲಿ ಕೊಂಕಣಿ ಖಾರ್ವಿ ಸಮುದಾಯದವರ ವತಿಯಿಂದ ಹೋಳಿ ಹಬ್ಬ ಶನಿವಾರ ಆಚರಿಸಲಾಯಿತು.
ಗಂಗೊಳ್ಳಿ, ಗುಜ್ಜಾಡಿ, ಕಂಚುಗೋಡು, ಹೊಸಪೇಟೆ, ತ್ರಾಸಿ ಮೊದಲಾದ ಕಡೆಗಳಿಂದ ಬೃಹತ್ ಮೆರವಣಿಗೆಯಲ್ಲಿ ನೂರಾರು ಜನರು ಆಗಮಿಸಿದ್ದು, ಬಣ್ಣ ಹಚ್ಚುವುದರ ಜತೆ ಕುಣಿದು ಸಂಭ್ರಮಿಸಿದರು. ವಿಶೇಷ ಉಡುಗೆಗಳ ತೊಟ್ಟ ಯುವಕ ಯುವತಿಯರ ಗುಂಪುಗಳನು ಜನಾಕರ್ಷಣೆಗೊಂಡವು.
ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಬೃಹತ್ ಜನಸಮೂಹದಿಂದ ಹೋಳಿ ಆಚರಿಸಲಾಯಿತು. ಬಳಿಕ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಹೋಳಿ ಸಂಪನ್ನಗೊಂಡಿತು.
ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಲ್ಲಿ ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸವಿತ್ರ ತೇಜ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಹರೀಶ್ ಆರ್ ಮತ್ತು ಕುಂದಾಪುರ ಪೊಲೀಸ್ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷರು ಹಾಗೂ ಸಿಬ್ಬಂದಿ ಗಂಗೊಳ್ಳಿಯ ಎಲ್ಲೆಡೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.