

ಕುಂದಾಪುರ: ಮಹಿಳೆಯ ಹಕ್ಕು ಮತ್ತು ಸಮಾನತೆಗೆ ಹೋರಾಟದ ನೆನಪಿನಲ್ಲಿ ಆರಂಭವಾದ ವಿಶ್ವ ಮಹಿಳಾ ದಿನ ವಿಶ್ವಾದ್ಯಂತ ಆಚರಿಸಲ್ಪಡುತ್ತಿದೆ. ಮಹಿಳೆ ಮಹತ್ವಿಕೆ, ಸಾಧನೆ, ಸಮಾನತೆ ವಿಚಾರ ಪ್ರಚುರ ಪಡಿಸುವುದು, ಸ್ವಾವಲಂಬಿಯಾಗಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವಂತಾಗಬೇಕು ಎನ್ನುವುದು ಆಚರಣೆ ಉದ್ದೇಶ ಎಂದು ಕುಂದಾಪುರ ಮಹಿಳಾ ಮತ್ತು ಮಕ್ಕಳಾ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷೆ ಗುಣರತ್ನ ಹೇಳಿದರು.
ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಕುಂದಾಪುರ ವತಿಯಿಂದ ವಿಶ್ವ ಮಹಿಳಾ ದಿನವನ್ನು ಕುಂದಾಪುರದ ಚೈತನ್ಯ ವೃದ್ಧಾಶ್ರಮದಲ್ಲಿ ಆಚರಿಸಿ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಲಲಿತಾ ಕುಂದಾಪುರ ಹಾಗೂ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಸದಸ್ಯರು, ಚೈತನ್ಯ ವೃದ್ಧಾಶ್ರಮ ಮುಖ್ಯಸ್ಥರು ಉಪಸ್ಥಿತರಿದ್ದರು.