ಹೆಬ್ರಿಯಲ್ಲಿ ಆರೋಗ್ಯ ಮಾಹಿತಿ ಕಾರ‌್ಯಕ್ರಮ

arogya mahiti shibira
ಪ್ಯಾಡ್ ಬನಿರ್ಂಗ್ ಮಷಿನನ್‌ನ್ನು ಹೆಬ್ರಿ ಸರ್ಕಾರಿ ಕಾಲೇಜು ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು.
Published on

ಹೆಬ್ರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಣ್ಣು ಮಕ್ಕಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ಶನಿವಾರ ನಡೆಯಿತು. ಹೆಬ್ರಿ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್. ಐತಾಳ್ ಶುಭಹಾರೈಸಿದರು. ಆಶಾ ಕಾರ್ಯಕರ್ತೆ ವಿನಯ ಕುಲಾಲ, ಕಾಲೇಜಿನಲ್ಲಿ ಸ್ವಚ್ಛತಾ ಸಿಬ್ಬಂದಿ ಅಕ್ಕಣಿ ಅವರನ್ನು ಗೌರವಿಸಲಾಯಿತು. ಬಳಿಕ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಸಹಯೋಗದಲ್ಲಿ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಮಷಿನ್ ಹಸ್ತಾಂತರಿಸಲಾಯಿತು. ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ ಎಸ್, ಸೋನಿ ಪಿ. ಶೆಟ್ಟಿ, ನಾಗೇಶ ನಾಯಕ್, ಡಾ.ಅರ್ಪಿತಾ ಶೆಟ್ಟಿ, ಶಿಲ್ಪಾ ಬಿ.ಎಸ್, ರಕ್ಷಿತಾ ಪಿ.ಭಟ್ಟ, ರಂಜಿತ ಆರ್.ಪ್ರಭು, ಉದಯ ಶೇರಿಗಾರ್, ಆಶಾ, ಟಿ.ಜಿ.ಆಚಾರ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net