

ಕೋಟ: ಪರಿಶ್ರಮದ ಮೂಲಕ ಸಾಧನೆ ಮಜಲು ದಾಟಲು ಸಾಧ್ಯ ಎನ್ನುವುದಕ್ಕೆ ಶಮಂತ್ ಕುಮಾರ್ ಸಾಕ್ಷಿ. ತನ್ನ ಚಿಕ್ಕ ವಯಸ್ಸಿನಲ್ಲೆ ಸಾಧನೆ ಶಿಖರಕ್ಕೆ ಮುಮ್ಮಡಿ ಇಟ್ಟಿದ್ದಾರೆ ಇದು ಪ್ರಶಂಸನೀಯ ಎಂದು ನಿವೃತ್ತ ಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್ ಹೇಳಿದರು
ಕೋಟದ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲ ವತಿಯಿಂದ ಭಾನುವಾರ ಪಿಎಚ್.ಡಿ ಪದವಿ ಪಡೆದ ಸಂಸ್ಥೆಯ ಸದಸ್ಯ ಶಮಂತ್ ಕುಮಾರ್ ಅವರಿಗೆ ಪಂಚವರ್ಣ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಮಂತ್ ಕುಮಾರ್ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು. ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ ಪೂಜಾರಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಹಿರಿಯ ಸಾಹಿತಿ ಶಾಂತಾ ಬಿ.ಐತಾಳ್, ಪಂಚವರ್ಣ ಯುವಕ ಮಂಡಲ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಶಮಂತ್ ಕುಮಾರ್ ತಂದೆ ಶ್ರೀಧರ ಗಾಣಿಗ, ಸಹೋದರಿ ಶಿಲ್ಪಾ ವಿ.ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಸಂಚಾಲಕಿ ಸುಜಾತಾ ಬಾಯರಿ ನಿರೂಪಿಸಿದರು. ಯುವಕ ಮಂಡಲ ಸದಸ್ಯ ಕೇಶವ ಆಚಾರ್ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.