

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯ ಶ್ರೀ ಧ.ಮಂ.ಕಾಲೇಜಿನಲ್ಲಿ ಹಿಂದಿ ವಿಭಾಗ ಹಾಗೂ ಕೆನರಾ ಬ್ಯಾಂಕ್ ಉಜಿರೆ ಶಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಿಂದಿ ಮತ್ತು ದಣ ಭಾರತೀಯ ಭಾಷೆೆಗಳ ಅಂತರ್ ಸಂಬಂಧ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.
ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ 22 ಅಧಿಕೃತ ಭಾಷೆಗಳಿದ್ದರೂ 121 ಭಾಷೆಗಳು ಗುರುತಿಸಲ್ಪಟ್ಟಿದ್ದರೂ ಹಿಂದಿ ಭಾಷೆ ಮಾತ್ರ ರಾಷ್ಟ್ರಭಾಷೆಯಾಗಿ ಗುರುತಿಸಲ್ಪಟ್ಟಿದೆ. ಭಾಷೆಯು ಎಲ್ಲರನ್ನು ಬೇರ್ಪಡಿಸಲು ಇರುವುದಲ್ಲ. ಭಾರತೀಯರಾದ ನಮ್ಮನ್ನು ನಾವು ಗುರುತಿಸಿಕೊಳ್ಳಲು ಹಿಂದಿ ಭಾಷೆ ಬಹಳ ಮುಖ್ಯ ಎಂದರು.
ಮದ್ರಾಸಿನ ದಣ ಭಾರತ ಹಿಂದೀ ಪ್ರಚಾರ ಸಭಾದ ಉನ್ನತ ಶಿಕ್ಷಣ ಮತ್ತು ಶೋಧ ಸಂಸ್ಥಾನದ ನಿರ್ದೇಶಕ ಡಾ.ಸುಭಾಷ್ ಜಿ.ರಾಣೆ ಮಾತನಾಡಿ, ಭಾರತದ ಯಾವ ಮೂಲೆಗೂ ಹೋದರೂ ಹಿಂದಿ ಭಾಷೆ ಬಹಳ ಪ್ರಯೋಜನಕ್ಕೆ ಬರುತ್ತದೆ ಎಂದರು.
ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ ಡಾ.ಮುಕುಂದ ಪ್ರಭು, ಹಿಂದಿ ಭಾಷೆೆಯ ಇತಿಹಾಸ ಮತ್ತು ಸಾಹಿತ್ಯಿಕ ಕೆಲಸಗಳ ಕುರಿತು ಮಾಹಿತಿ ನೀಡಿದರು.
ಸೋಲಾಪುರದ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಲಕರ್ ವಿಶ್ವವಿದ್ಯಾಲಯದ ಅಧಿಸಭಾ ಸದಸ್ಯ ಮತ್ತು ಸಾಹಿತಿ ಪ್ರೊ. ಧನ್ಯಕುಮಾರ್ ಬಿರಾಜ್ದ್ದಾರ್ ಮಾತನಾಡಿದರು.
ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದರು.
ಜಿಲ್ಲೆಯ ವಿವಿಧ ಹತ್ತು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಗೂ ಶ್ರೀ ಧ.ಮಂ.ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಹಿಂದಿ ವಿಭಾಗ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ್ ಎನ್.ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಶ್ರುತಿ ಮನಕೀಕರ್ ನಿರೂಪಿಸಿದರು. ದ್ವೀತಿಯ ಬಿಕಾಂ ವಿದ್ಯಾರ್ಥಿನಿ ಧಾರಿಣಿ ವಂದಿಸಿದರು.
ಭಾರತೀಯರಲ್ಲಿನ ಒಗ್ಗಟ್ಟು, ಏಕತೆ ಮತ್ತು ಸೌಹಾರ್ದತೆಗೆ ಹಿಂದಿ ಭಾಷೆಯ ಯೋಗದಾನ ಮಹತ್ವದ್ದಾಗಿದೆ. ದೇಶದ ಬಹುಪಾಲು ಜನರು ಹಿಂದಿ ಭಾಷೆಯನ್ನು ಬಳಸುವಾಗ ಎಲ್ಲರೂ ಈ ಭಾಷೆಯನ್ನು ಕಲಿಯುವುದು ಬಹಳ ಮುಖ್ಯವಾಗುತ್ತದೆ. ರಾಷ್ಟ್ರೀಯ ಪರಿಕಲ್ಪನೆ ವೃದ್ಧಿಗೆ ಹಿಂದಿ ಭಾಷೆೆ ಕಲಿಯಲೇಬೇಕು. ಆ ಭಾಷೆಯಲ್ಲಿನ ಶ್ರೇಷ್ಠ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು. ಡಾ.ಬಿ.ಎ.ಕುಮಾರ ಹೆಗ್ಡೆ, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ
ಡಾ.ಬಿ.ಎ.ಕುಮಾರ ಹೆಗ್ಡೆ, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ