ಎಸ್‌ಡಿಎಂಸಿ ಅಧ್ಯಕ್ಷೆಯಾಗಿ ಹೇಮಲತಾ ಆಯ್ಕೆ

New Project (15)
Published on

ಕಡಬ: ಕುಮಾರ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ. ಎಂ.ಸಿ ಅಧ್ಯಕ್ಷರಾಗಿ ಹೇಮಲತಾ ಮತ್ತು ಉಪಾಧ್ಯಕ್ಷರಾಗಿ ಗಂಗಾಧರ ಕನ್ಯಾಮಂಗಲ ಸರ್ವಾನುಮತದಿಂದ ಆಯ್ಕೆಯಾದರು. ಸಮಿತಿಯನ್ನು ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಬಿ.ಎಸ್.ಮತ್ತು ಉಪಾಧ್ಯಕ್ಷೆ ಜಯಶ್ರೀ ಕುಚ್ಛೆಜಾಲು ಉಪಸ್ಥಿತಿಯಲ್ಲಿ ರಚಿಸಲಾಯಿತು.

ಸದಸ್ಯರಾಗಿ ಯಶೋದ ನೂಜಾಜೆ, ಸರಿತಾ, ವೇದಾವತಿ, ಮಮತಾ, ಶ್ಯಾಮಲಾ, ಅಕ್ಕು, ರೇಖಾ, ಸ್ಮಿತಾ, ಲೀಲಾವತಿ, ತಾರಾಮಣಿ, ಸುರೇಖಾ, ಜಯಂತಿ, ಕೆ.ಸುಂದರ, ರಮೇಶ್, ಸಂಜೀವ ಶೆಟ್ಟಿ, ಕೃಷ್ಣಪ್ಪ ಗೌಡ ಬೊಳ್ಳಾಜೆ, ನಾಮನಿರ್ದೇಶಿತ ಸದಸ್ಯರಾಗಿ ಸವಣೂರು ಗ್ರಾಪಂ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಶಿಕ್ಷಕ ಪ್ರತಿನಿಧಿಯಾಗಿ ಶ್ಯಾಮ್ ಕೆ., ವಿದ್ಯಾರ್ಥಿ ಪ್ರತಿನಿಧಿಯಾಗಿ ರಶ್ಮಿ ಆರ್.ಆಯ್ಕೆಯಾದರು.

ಪದನಿಮಿತ್ತ ಸದಸ್ಯರಲ್ಲಿ ಕಾರ್ಯದರ್ಶಿಯಾಗಿ ಶಾಲೆ ಮುಖ್ಯಶಿಕ್ಷಕ ಸಂತೋಷ್ ಎನ್.ಟಿ., ಆರೋಗ್ಯ ಕಾರ್ಯಕರ್ತೆ ಅಕ್ಷತಾ.ಕೆ, ಅಂಗನವಾಡಿ ಕಾರ್ಯಕರ್ತೆ ಜಾನಕಿ ಅವರನ್ನು ಆಯ್ಕೆ ಮಾಡಲಾಯಿತು. ಸವಣೂರು ಗ್ರಾಪಂ ಸದಸ್ಯ ಗಿರಿ ಶಂಕರ ಸುಲಾಯ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಕೆ.ಸವಣೂರು, ಜತೆಕಾರ್ಯದರ್ಶಿ ಉಮೇಶ್ ಬೇರಿಕೆ ಕುಮಾರಮಂಗಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net