ಲೋಕೋಪಯೋಗಿ ಬೋರ್ಡ್ ಎಡವಟ್ಟು

New Project (5)
Published on

ಬೆಳ್ತಂಗಡಿ: ಸ್ಥಳೀಯ ಹೆಸರುಗಳ ಸರಿಯಾದ ಮಾಹಿತಿ ಇಲ್ಲದಿದ್ದರೆ ಏನೆಲ್ಲಾ ಯಡವಟ್ಟುಗಳು ಆಗುತ್ತವೆ ಎಂಬುದಕ್ಕೆ ಲೋಕೋಪಯೋಗಿ ಇಲಾಖೆಯವರು ಅಳದಂಗಡಿಯಲ್ಲಿ ಹಾಕಿರುವ ನಾಮಫಲಕವೇ ಸಾಕ್ಷಿ.

ಇಲಾಖೆ ಗುರುವಾಯನಕೆರೆ-ನಾರಾವಿ-ಕಾರ್ಕಳ ರಾಜ್ಯಹೆದ್ದಾರಿಯಲ್ಲಿ ಅಲ್ಲಲ್ಲಿ ಊರುಗಳ ಹೆಸರಿರುವ ನಾಮಫಲಕ ಅಳವಡಿಸಿದೆ. ಇವುಗಳಲ್ಲಿ ಅಳದಂಗಡಿ ದೈವಸ್ಥಾನದ ಪಕ್ಕದಲ್ಲಿ ಹಾಕಿರುವ ಫಲಕದಲ್ಲಿ ದೈವದ ಹೆಸರು ಅಪಭ್ರಂಶಗೊಂಡಿದೆ. ಶ್ರೀಸತ್ಯದೇವತೆ ದೈವಸ್ಥಾನ ಅಳದಂಗಡಿ ಎಂದು ಬರೆಯುವ ಬದಲು, ‘ಸತ್ಯದೇವಾತ ದೇವಸ್ಥಾನ ಅಳದಂಗದಿ’ ಎಂದು ಬರೆಯಲಾಗಿದೆ. ಸತ್ಯದೇವತೆ ಇರುವಲ್ಲಿ ಸತ್ಯದೇವಾತ, ದೈವಸ್ಥಾನ ಇರಬೇಕಾದಲ್ಲಿ ದೇವಸ್ಥಾನ, ಅಳದಂಗಡಿ ಬದಲಾಗಿ ಅಳದಂಗದಿ ಎಂದು ಬರೆಯಲಾಗಿದೆ. ಫಲಕ ಹೀಗೇಯೇ ಕೆಲಕಾಲ ಇದ್ದರೆ ಅದರಲ್ಲಿ ಇರುವ ಹೆಸರೇ ಚಾಲ್ತಿಯಲ್ಲಿ ಬಂದರೆ ಅಚ್ಚರಿಯಿಲ್ಲ. ಇನ್ನಾದರೂ ಇಲಾಖೆಯವರು ಸರಿಯಾದ ಫಲಕ ಅಳವಡಿಸುತ್ತಾರೆಯೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net