

ಕುಂಬಳೆ: ಬಾಲ್ಯದಲ್ಲಿಯೇ ನಾವು ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕಷ್ಟದಲ್ಲಿರುವವರ ನೋವನ್ನು ಅರಿಯುವ ಮನಸ್ಸಿರಬೇಕು ಎಂದು ಸಮಾಜ ಸೇವಕ, ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು.
ಕುಂಬಳೆಯ ಕಾಲೇಜ್ ಅಪ್ಲೈಡ್ ಸಯನ್ಸ್ ಮಂಜೇಶ್ವರದ ಕಾಲೇಜ್ ಯೂನಿಯನ್ ವಿವೇಕಾದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.
ಪ್ರಾಂಶುಪಾಲ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಮಧುಲಾಲ್ ಕೊಯಿಲಾಂಡಿ ಫೈನ್ ಆರ್ಟ್ಸ್ ಉದ್ಘಾಟಿಸಿದರು. ಪ್ಲವರ್ಸ್ ಕಾಮಿಡಿ ಉತ್ಸವಂ ಫೇಮ್ ಸುರೇಶ್ ಯಾದವ್ ಭಾಗವಹಿಸಿದ್ದರು. ಇಬ್ಬರು ಕಲಾವಿದರನ್ನು ಸನ್ಮಾನಿಸಲಾಯಿತು.
ಕಾಲೇಜು ಸೂಪರಿಂಡೆಂಟ್ ಜೋಸ್ ನಿರಪ್ಪತ್, ನೌಕರ ಸಂಘದ ಕಾರ್ಯದರ್ಶಿ ವಿಜಯಶ್ರೀ, ಯೂನಿಯನ್ ಸ್ಟಾಫ್ ಅಡ್ವೈಸರ್ ಕಮಲಾಕ್ಷಿ, ಫೈನ್ ಆರ್ಟ್ಸ್ ಅಡ್ವೈಸರ್ ಬಬಿತಾ, ಉಪಾಧ್ಯಕ್ಷೆ ಹರ್ಷಿತಾ ಕೆ, ಸಹ ಕಾರ್ಯದರ್ಶಿ ಮನೀಷಾ ಬಿ, ಫೈನ್ ಆರ್ಟ್ಸ್ ಕಾರ್ಯದರ್ಶಿ ಶ್ರೀಜಿತಾ ಪಿ.ಜಿ, ಯುಯುಸಿ ವಿಜಿತ್, ಸ್ಪೋರ್ಟ್ಸ್ ಕ್ಯಾಪ್ಟನ್ ಅಖಿನೇಶ್ ಭಾಸ್ಕರನ್ ಉಪಸ್ಥಿತರಿದ್ದರು.
ಕಾಲೇಜು ಯೂನಿಯನ್ ಕಾರ್ಯದರ್ಶಿ ಉಷಾ ಕುಮಾರಿ ಸ್ವಾಗತಿಸಿದರು. ಅಧ್ಯಕ್ಷೆ ಹರ್ಷಿಣಿ ಎಸ್. ವಂದಿಸಿದರು. ದೇವಿಕಾ ರಾಜನ್ ನಿರೂಪಿಸಿದರು.