45 ವಲಸೆ ಕುಟುಂಬಗಳಿಗೆ ಸಹಾಯ

jayanthi
Published on

ಬೆಂಗಳೂರು: ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಮಾಸ್ಟರ್​ ಆಫ್​ ಸೋಶಿಯಲ್​ ವರ್ಕ್​ ವಿದ್ಯಾರ್ಥಿಗಳು ಪ್ರಾಜೆಕ್ಟ್​ ಅನ್ನದಾನದ ಬ್ಯಾನರ್​ ಅಡಿ 45 ವಲಸೆ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ.

ಬೆಲ್ಲಹಳ್ಳಿ ಬಂಡೆಯಲ್ಲಿ ಡ್ರಮ್​ ತಯಾರಿಸುವ ಉತ್ತರ ಪ್ರದೇಶ ಮೂಲದ 45 ವಲಸೆ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ಹಗಲಿರುಳು ಶ್ರಮಿಸುತ್ತಿರುವುದನ್ನು ಕಂಡು ಅನಘಾ ಸಜನ್​, ರಿಂಗ್​ಚಾಮ್​ಸುಯಿಲಿಯು ಪಮೇ, ಮೈಟಾಂಗ್​ಕೈಶಾಂಗ್​ಬಮ್​ ರೀಯಾ ದೇವಿ, ಎಸ್​.ರೂಪಶ್ರೀ, ಡೇರಿಸ್​ ರಾಬಿನ್​ ನೇತೃತ್ವದ ವಿದ್ಯಾರ್ಥಿಗಳು, ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಬ್ಬನ್​ ಪಾರ್ಕ್​ ಮತ್ತು ಚರ್ಚ್​ ಸ್ಟ್ರೀಟ್​ನ ಬೀದಿಗಳಲ್ಲಿ ಕ್ರೌಡ್​ಫಂಡ್​ ಸಂಗ್ರಹಿಸಿ ವಲಸೆ ಕುಟುಂಬಗಳಿಗೆ ಮೂಲಸೌಕರ್ಯ ಕಲ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net