ಜು.13ರಿಂದ ರಾಜ್ಯದಲ್ಲಿ ಮಳೆ ಚುರುಕು

web-rain-bayndoor1
Published on

ಬೆಂಗಳೂರು: ವಾರದಿಂದ ಅಬ್ಬರಿಸಿ ಇಳಿಮುಖವಾಗಿದ್ದ ಮಳೆ, ಜು.13ರಿಂದ ಚುರುಕುಗೊಳ್ಳುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ,ಶಿವಮೊಗ್ಗ, ಕೊಡಗು,ಚಿಕ್ಕಮಗಳೂರಿನಲ್ಲಿ ಜು.14ರಿಂದ ಜು.16ರವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್​ ಅರ್ಲಟ್​ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಯೆಲ್ಲೋ ಅರ್ಲಟ್​ ಇರಲಿದೆ.

ಬೆಳಗಾವಿಯಲ್ಲಿ ಜು.13ರಿಂದ ಮುಂದಿನ 4 ದಿನ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಜು.15ರಂದು ಹೆಚ್ಚಾಗಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್​ ನೀಡಲಾಗಿದೆ. ಬೆಂಗಳೂರು, ಬೆಂ .ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ತುಮಕೂರು, ವಿಜಯನಗರ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮುಂದಿನ ಎರಡು ದಿನ ಸಾಧಾರಣ ವರ್ಷಧಾರೆಯಾಗಲಿದೆ.

ಹವಾಮಾನ ಇಲಾಖೆ ಹಿರಿಯ ಅಧಿಕಾರಿ ಸಿ.ಎಸ್​.ಪಾಟೀಲ್​ ಮಾತನಾಡಿ, ಕಳೆದ ವಾರ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು. ಆದರೆ,2-3 ದಿನಗಳಿಂದ ಕರಾವಳಿ, ಉತ್ತರ ಮತ್ತು ದಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಜು.13ರಿಂದ ಕರಾವಳಿ, ಮಲೆನಾಡು ಭಾಗಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net