14ರಂದು ಆರೋಗ್ಯ ತಪಾಸಣೆ ಉಚಿತ ಶಿಬಿರ

Bdk_Health-Checkup
Published on

ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಸೆ.14ರಂದು ಬೆಳಗ್ಗೆ 9 ಗಂಟೆಗೆ ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ, ಮಂಗಳೂರು ನೇತೃತ್ವದಲ್ಲಿ ಪ್ರತಿಷ್ಠಾನದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಡಾ.ಅರವಿಂದ ಎನ್.ಬಿ. ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ಎಲುಬು, ಕೀಲು ರೋಗ, ಸಾಮಾನ್ಯ ರೋಗ ವಿಭಾಗ, ಕಣ್ಣಿನ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ಚರ್ಮರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು. ತಜ್ಞ ವೈದ್ಯರು ಆರೋಗ್ಯ ಮಾಹಿತಿ ನೀಡಲಿದ್ದಾರೆ. ಜತೆಗೆ ಉಚಿತ ಬಿ.ಪಿ., ಶುಗರ್ ತಪಾಸಣೆ, ಉಚಿತ ಔಷಧಗಳು ನಾಗರಿಕರಿಗೆ ಲಭ್ಯವಿರುತ್ತದೆ.

ಫಲಾನುಭವಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತವಿದ್ದರೆ ಕೆ.ಎಂ.ಸಿ. ಆಸ್ಪತ್ರೆ ಹಸಿರು ಕಾರ್ಡ್ ನೀಡಲಾಗುವುದು. ಒಂದು ತಿಂಗಳ ಮಾನ್ಯತೆ ಹೊಂದಿರುವ ಈ ಕಾರ್ಡ್ ಮುಖಾಂತರ ಫಲಾನುಭವಿಗಳು ಉಪಯೋಗ ಪಡೆದುಕೊಳ್ಳಬಹುದು ಎಂದು ಪ್ರತಿಷ್ಠಾನ ಪ್ರಕಟಣೆ ಮೂಲಕ ವಿನಂತಿಸಿದೆ. ಕಾಸರಗೋಡಿನ ಹಿರಿಯ ವೈದ್ಯರುಗಳು ಸಲಹೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net