ಕೊಕ್ಕರ್ಣೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

shibira
Published on

ಕೊಕ್ಕರ್ಣೆ: ಸ್ಫೂರ್ತಿ ಯುವವೇದಿಕೆ ಕೋಟಂಬೈಲು ಸಂಯೋಜನೆಯಲ್ಲಿ ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು, ಪ್ರಸಾದ್ ನೇತ್ರಾಲಯ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಕ್ಕರ್ಣೆ ಸಹಯೋಗದಲ್ಲಿ ಕೋಟಂಬೈಲು ಶ್ರೀ ಗೋಪಾಲಕೃಷ್ಣ ಮಠದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಪುರೋಹಿತ ಶ್ರೀ ರಂಗನಾಥ್ ಭಟ್ ಕೋಟಂಬೈಲು ಉದ್ಘಾಟಿಸಿದರು. ಸ್ಫೂರ್ತಿ ಯುವ ವೇದಿಕೆ ಅಧ್ಯಕ್ಷ ವಿಘ್ನೇಶ್ ರಂಜಾಲ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡರಾದ ಗಿರೀಶ್ ಉಡುಪ, ವೆಂಕಟೇಶ ವಾಕುಡ, ಕೋಮಲ ರಾಘವೇಂದ್ರ ನಿಂಜೂರು, ಶಿವಾನಂದ ನಾಯಕ್, ಬಾಲಕೃಷ್ಣ ಉಡುಪ, ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅಖಿಲಾ ಡಿ., ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರಂಜನ್, ಪ್ರಸಾದ್ ನೇತ್ರಾಲಯದ ಡಾ.ಪ್ರತಿಭಾ, ಸೂರಾಲು ವಲಯ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಅನಂತಪದ್ಮನಾಭ ವಾಕುಡ, ವೆಂಕಟೇಶ ವಾಕುಡ ಕೋಟಂಬೈಲು, ರಾಘವೇಂದ್ರ ನಿಂಜೂರು ಕೋಟಂಬೈಲು, ಸಮುದಾಯ ವೈದ್ಯಕೀಯ ವಿಭಾಗದ ಸಾಮಾಜಿಕ ಕಾರ್ಯಕರ್ತ ಮಹೇಶ್, ಪುಷ್ಪಾ, ಸುಕೇತ, ಪ್ರಸಾದ್ ನೇತ್ರಾಲಯ ಪಿಆರ್‌ಒ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ನಾಯ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net