ಹೊಸ ವರ್ಷಕ್ಕೆ ಬೈರಂಪಳ್ಳಿ ಗ್ರಾಪಂ ಬಂದ್

bund new
Published on

ಹೆಬ್ರಿ: ಮೂವರು ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಬೈರಂಪಳ್ಳಿ ಗ್ರಾಪಂ ಮಧ್ಯಾಹ್ನದ ತನಕ ಬಂದ್ ಆಗಿ, ಸಾರ್ವಜನಿಕರಿಗೆ ಸೇವೆಯಲ್ಲಿ ವೃತ್ಯಯ ಉಂಟಾಯಿತು.

ಪಿಡಿಒ ಹಾಗೂ ಪಂಚಾಯಿತಿ ಸದಸ್ಯರಿಂದ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸುಮನಾ, ವಸಂತಿ, ಮನೋಹರ್ ಎಂಬುವರು ಡಿ.19ರಂದು ರಾಜೀನಾಮೆ ನೀಡಿದ್ದು, ಡಿ.31ರ ಒಳಗಾಗಿ ಅಂಗೀಕಾರ ಮಾಡಬೇಕೆಂದು ಕೇಳಿಕೊಂಡಿದ್ದರು.

ಪಂಚಾಯಿತಿ ಅಧ್ಯಕ್ಷರು ರಾಜೀನಾಮೆ ಅಂಗೀಕಾರ ಮಾಡದೆ, ರಾಜೀನಾಮೆ ಪತ್ರ ಇಒ ಹಾಗೂ ಸಿಇಒಗೆ ಡಿ.20ಕ್ಕೆ ಕಳುಹಿಸಿದ್ದು, ಯಾವುದೇ ಸಮರ್ಪಕ ಉತ್ತರ ಬಂದಿರಲಿಲ್ಲ. ಆ ನಿಟ್ಟಿನಲ್ಲಿ ಬುಧವಾರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಬಂದ್ ಇದ್ದಿತು. ಕಾರ್ಯದರ್ಶಿ 15 ದಿನಗಳಿಂದ ರಜೆಯಲ್ಲಿದ್ದಾರೆ. ಪಿಡಿಒ ಪ್ರಭಾರಿಯಲ್ಲಿರುವುದರಿಂದ ಬೇರೆ ಪಂಚಾಯಿತಿಯಲ್ಲಿದ್ದರು. ಮಧ್ಯಾಹ್ನ 12.30ಕ್ಕೆ ಉಡುಪಿ ತಾಪಂ ಇಒ ಸ್ಥಳಕ್ಕೆ ಆಗಮಿಸಿ ಪಂಚಾಯಿತಿ ತೆರೆದರು.

ವಿಡಿಯೋ ವೈರಲ್

ತಮ್ಮ ಕೆಲಸಗಳಿಗಾಗಿ ಕಚೇರಿಗೆ ಆಗಮಿಸಿದ ಗ್ರಾಮಸ್ಥರ ಪರದಾಟ ಹಾಗೂ ಬಂದ್ ಇರುವುದನ್ನು ಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರಿಂದ ಇಒ ಗ್ರಾಪಂ ಕಚೇರಿ ಬಾಗಿಲು ತೆರೆದು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕ್ರಮ ವಹಿಸಿದರು. ಆದರೆ ಸಿಬ್ಬಂದಿ ಗೈರಿನಿಂದ ಸೇವೆ ಇಲ್ಲದೆ ನಿರಾಸೆ ಉಂಟಾಯಿತು.

ಬುಧವಾರ ಮಧ್ಯಾಹ್ನ 12.30ಕ್ಕೆ ಪಂಚಾಯಿತಿ ತೆರೆಯಲಾಗಿದೆ. ನನಗೆ ರಾಜೀನಾಮೆ ಸಿಕ್ಕಿದ ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದೇನೆ. ಯಾವುದೇ ಸಮರ್ಪಕ ಉತ್ತರ ನಮಗೆ ಬಂದಿಲ್ಲ. ಪಂಚಾಯಿತಿ ಬಂದ್ ಇದ್ದ ಹಿನ್ನೆಲೆ ಸಾರ್ವಜನಿಕರಿಗೆ ದೊಡ್ಡಮಟ್ಟದ ಸಮಸ್ಯೆ ಆಗಿದೆ. -ಪ್ರಸಾದ್ ಮಲ್ಯ ಬೈರಂಪಳ್ಳಿ ಗ್ರಾಪಂ ಅಧ್ಯಕ್ಷ ನಮಗೆ ಪಂಚಾಯಿತಿಯಲ್ಲಿ ಕೆಲಸ ಮಾಡುವಂತ ಪ್ರತಿಕೂಲ ವಾತಾವರಣವಿಲ್ಲ. ಮಾನಸಿಕ ಹಿಂಸೆ ಉಂಟಾದ ಹಿನ್ನೆಲೆ ಮೂರು ಜನ ಸೇರಿ ಸಾಮೂಹಿಕ ರಾಜೀನಾಮೆಗೆ ಒಂದಾಗಿದ್ದೇವೆ. ಆರೋಗ್ಯದ ದೃಷ್ಟಿ ನೋಡಿಕೊಂಡು ಈ ನಿರ್ಧಾರ ಮಾಡಿರುತ್ತೇವೆ. -ಮನೋಹರ್ ರಾಜೀನಾಮೆ ನೀಡಿದ ಸಿಬ್ಬಂದಿ ರಾಜೀನಾಮೆ ಅಂಗೀಕಾರ ಮಾಡುವುದು ಬಿಡುವುದು ಪಂಚಾಯಿತಿಗೆ ಸಂಬಂಧಿಸಿದ್ದು. ಸಿಬ್ಬಂದಿ ನಿಯಂತ್ರಣ ಅವರ ಬಳಿಯಲ್ಲಿದೆ. ನನಗೆ ಯಾವುದು ಸಂಬಂಧ ಇಲ್ಲ. -ವಿಜಯ ನಾಯ್ಕ, ಉಡುಪಿ ತಾಪಂ ಇಒ https://www.vijayavani.net/successful-surgery-for-injured-python https://www.vijayavani.net/heaps-of-waste-on-the-roadside

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net