ದೇಶಕ್ಕೆ ಶಾಶ್ವತ ಕೊಡುಗೆ

amara shilpi
Published on

ಹೆಬ್ರಿ: ಅಮರಶಿಲ್ಪಿ ಜಕಣಾಚಾರಿ ವಿಶ್ವಕರ್ಮರಿಗೆ ಮತ್ತು ದೇಶಕ್ಕೆ ಶಾಶ್ವತ ಕೊಡುಗೆ ನೀಡುವ ಮೂಲಕ ನಿತ್ಯಸ್ಮರಣೀಯರಾಗಿದ್ದಾರೆ. ವಿಶ್ವಕ್ಕೆ ಶ್ರೇಷ್ಠ ಶಿಲ್ಪ ನೀಡುವ ಮೂಲಕ ಕೀರ್ತಿ ತಂದಿದ್ದಾರೆ ಎಂದು ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಹೇಳಿದರು.

ಹೆಬ್ರಿ ತಾಲೂಕು ಕಚೇರಿಯಲ್ಲಿ ಬುಧವಾರ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ವಾನ್ ಹೆಬ್ರಿ ಚಂದ್ರಕಾಂತ್ ಪುರೋಹಿತ್ ವಿಶೇಷ ಉಪನ್ಯಾಸ ನೀಡಿದರು. ವಿಶ್ವಕರ್ಮ ಸಮಾಜ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ, ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಹೆಬ್ರಿ, ಗೌರವಾಧ್ಯಕ್ಷ ರತ್ನಾಕರ ಆಚಾರ್ಯ ಶಿವಪುರ, ಉಪಾಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ, ಹೆಬ್ರಿ ವಿಶ್ವಕರ್ಮ ಸಮುದಾಯದ ಮುಖಂಡರಾದ ಎಂ.ಪಿ.ಜಯರಾಮ ಆಚಾರ್ಯ, ಪ್ರೇಮಾ ಎಂ.ವರಂಗ, ಕಲಾವತಿ ಶ್ರೀಧರ ಆಚಾರ್ಯ, ಸುಕುಮಾರ್ ಮುನಿಯಾಲ್, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಟಿ.ಜಿ.ಆಚಾರ್ಯ ನಿರೂಪಿಸಿದರು. ಪ್ರೇಮಾ ಎಂ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net