VIDEO| ಇನ್ನೊಂದು ಆರು ತಿಂಗಳು ಸರ್ಕಾರ ಇದ್ದಿದ್ರೆ.. ಎಲ್ಲವೂ ಮುಗಿದು ಹೋಗ್ತಿತ್ತು ತಾಯಿ... ಎನ್ನುತ್ತ ಕೈಮುಗಿದ ಎಚ್​ಡಿಕೆ

hdk 1
Published on

ಮಂಡ್ಯ: ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿಗೆ ಭಾನುವಾರ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆ ವೇಳೆ ರಸ್ತೆಯಲ್ಲೇ ಅಡ್ಡಗಟ್ಟಿದ ಗ್ರಾಮದ ಮೂವರು ಮಹಿಳೆಯರು, ಕೆಲ ಬೇಡಿಕೆಗಳನ್ನು ಎಚ್​ಡಿಕೆ ಬಳಿ ಇಟ್ಟರು.

'ನಾನು ಶ್ರೀಮಂತರ ಪರ ಅಲ್ಲ, ಬಡವರ ಪರ ಇರುವವನು' ಎಂದು ಕೈ ಮುಗಿದ ಎಚ್​ಡಿಕೆ, 'ಆರು ತಿಂಗಳು ಸರ್ಕಾರ ಇದ್ದಿದ್ರೆ ನಿಮ್ಮೂರ ರಸ್ತೆ ಕಾಮಗಾರಿ ಮುಗಿದು ಹೋಗ್ತಿತ್ತು' ಎಂದರು. 'ಬಡವರನ್ನ ನೋಡಿ ಸ್ವಾಮಿ, ನಮ್ಮೂರಿಗೆ ರಸ್ತೆ ಮಾಡಿಸಿಕೊಂಡಿ' ಎಂದು ಮತ್ತೆ ಆ ಮಹಿಳೆಯರು ಕೈಮುಗಿದು ಮನವಿ ಮಾಡಿದರು. 'ಆಯ್ತು, ರಸ್ತೆ ಮಾಡಿಸಿಕೊಡುವೆ' ಎಂದು ಪ್ರತಿಕ್ರಿಯಿಸುತ್ತಿದ್ದಂತೆ ವೃದ್ಧೆಯೊಬ್ಬರು, 'ನನ್ನ ಮನೆ ಮಳೆ ಬಂದ್ರೆ ಸೋರ್ತಿದೆ, ಸಹಾಯ ಮಾಡಿ' ಎನ್ನುತ ಕೈ ಮುಗಿದರು. ಆಯ್ತು ಮಾಡೋಣ ಎಂದ ಎಚ್​ಡಿಕೆ ಮುಂದೆ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net