

ಉಡುಪಿ: ಈ ದೃಶ್ಯ ನೋಡಿದ್ರೆ ವೃದ್ಧ ಜೋಡಿಗೆ 'ಅಯ್ಯೋ ಪಾಪ...' ಎನ್ನುವ ಬದಲು 'ಅಯ್ಯೋ ರಾಮ' ಎನ್ನುತ್ತೀರಿ. ಭಿಕ್ಷುಕರ ನೆಪದಲ್ಲಿ ಬಂದವರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ಮನೆಯಂಗಳದಲ್ಲಿ ಹಾಯಾಗಿ ಕುಳಿತುಕೊಂಡರು. ನೋಡುತ್ತಿದ್ದಂತೆ ಅಲ್ಲಿದ್ದ ಕೋಳಿಗಳು ಖತಂ!
ಮನೆಯಂಗಳದಲ್ಲಿ ಕುಳಿತುಕೊಳ್ಳುವ ಈ ಜೋಡಿ ಅಲ್ಲಿದ್ದ ಕೋಳಿಗಳಿಗೆ ಕಾಳು ಹಾಕಿದ್ರು. ಕಾಳು ತಿನ್ನುವ ನೆಪದಲ್ಲಿ ಕೋಳಿಗಳು ಅವರಿಗೆ ಹೊಂದಿಕೊಂಡ ಕೆಲವೇ ಕ್ಷಣದಲ್ಲಿ ಕಾಳು ಹಾಕಿದ ಕೈಯಿಂದಲೇ ಕೋಳಿಗಳ ಕತ್ತು ಹಿಸುಕಿದ್ದಾರೆ. ಕಣ್ಮುಮುಚ್ಚಿ ತೆರೆಯುವುದರೊಳಗೆ ಆ ಕೋಳಿಗಳ ಕತ್ತು ಹಿಸುಕಿ ಜೋಳಿಗೆ ತುಂಬಿಸಿಕೊಂಡಿದ್ದಾರೆ. ಇದನ್ನೂ ಓದಿರಿ ವಾಟ್ಸ್ಆ್ಯಪ್ ವಿಡಿಯೋ ಕಾಲ್ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!
ಈ ಕೋಳಿ ಕದಿಯುವ ಖತರ್ನಾಕ್ ಜೋಡಿಯ ದೃಶ್ಯ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಸಾಂತೂರ್ ಗ್ರಾಮದ ಮುದರಂಗಡಿಯಲ್ಲಿ ಸಂಭವಿಸಿದೆ.
ಬೇಬಿ ಪೂಜಾರ್ತಿ ಎಂಬವರ ಮನೆಯ ಅಂಗಳದಲ್ಲಿ ಕೋಳಿ ಕಳವಾಗಿದ್ದು, ವೃದ್ಧ ಜೋಡಿಯ ಕೃತ್ಯವನ್ನು ಮನೆಯ ಮಹಿಳೆಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.