ಜಕ್ಕನಹಳ್ಳಿಕೊಪ್ಪಲು ಗ್ರಾಮದಲ್ಲಿ ನೀರಿಗೆ ಹಾಹಾಕಾರ

ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಆಗ್ರಹ
ಹೊಳೆನರಸೀಪುರ ತಾಲೂಕಿನ ಜಕ್ಕನಹಳ್ಳಿ ಕೊಪ್ಪಲು ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗ್ರಾಮದ ಶೋಭಾ, ಮೀನಾಕ್ಷಿ, ಸುಮಿತ್ರಾ, ಲಲಿತಾ, ನಂಜಮ್ಮ, ಮಂಜಮ್ಮ, ಹರೀಶ್, ಪೂಜಾರಿ ಸ್ವಾಮಿ, ರವಿ, ಪ್ರೇಮ್ ಕುಮಾರ್, ಸುರೇಶ್, ದರ್ಶನ್, ಯಶ್ವಂತ್, ಅಪ್ಪನ ಗೌಡ ಇತರರು ಇದ್ದರು.
ಹೊಳೆನರಸೀಪುರ ತಾಲೂಕಿನ ಜಕ್ಕನಹಳ್ಳಿ ಕೊಪ್ಪಲು ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗ್ರಾಮದ ಶೋಭಾ, ಮೀನಾಕ್ಷಿ, ಸುಮಿತ್ರಾ, ಲಲಿತಾ, ನಂಜಮ್ಮ, ಮಂಜಮ್ಮ, ಹರೀಶ್, ಪೂಜಾರಿ ಸ್ವಾಮಿ, ರವಿ, ಪ್ರೇಮ್ ಕುಮಾರ್, ಸುರೇಶ್, ದರ್ಶನ್, ಯಶ್ವಂತ್, ಅಪ್ಪನ ಗೌಡ ಇತರರು ಇದ್ದರು.
Published on: 

ಹೊಳೆನರಸೀಪುರ : ತಾಲೂಕಿನ ಜಕ್ಕನಹಳ್ಳಿಕೊಪ್ಪಲು ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಅಗತ್ಯ ಕ್ರಮ ಕೈಗೊಳ್ಳಲು ಗ್ರಾಮಸ್ಥರು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ 10 ಎಕರೆ 7 ಗುಂಟೆ ಸರ್ಕಾರಿ ಕೆರೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಕೊಳವೆ ಬಾವಿ ಕೊರೆಸಲಾಗಿತ್ತು. ಹತ್ತಾರು ವರ್ಷಗಳಿಂದ ಅದೇ ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಪೂರೈಕೆ ಆಗುತ್ತಿತ್ತು. ಇತ್ತೀಚೆಗೆ ಕೊಳವೆಬಾವಿ ಸಮೀಪದ ರೈತರೊಬ್ಬರು ಆ ಸ್ಥಳ ತಮ್ಮದೆಂದು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಗ್ರಾಮಕ್ಕೆ ನೀರು ಪೂರೈಕೆ ಸ್ಥಗಿತವಾಗಿದೆ. ಪರಿಣಾಮ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಇದರಿಂದ ತೀವ್ರ ತೊಂದರೆಯಾಗುತ್ತಿದ್ದು, ಎಲ್ಲಿಯೂ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರು ವಾಸವಿದ್ದು, ಕುಡಿಯುವ ನೀರಿಗಾಗಿ ದಿಕ್ಕು ತೋಚದಂತಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಆಡಳಿತ ಕೊರೆಸಿರುವ ಕೊಳವೆ ಬಾವಿಯನ್ನು ವಶಕ್ಕೆ ಪಡೆದು ಗ್ರಾಮಕ್ಕೆ ನೀರು ಪೂರೈಸಬೇಕು. ಇದೇ ಬೆಳವಣಿಗೆ ಮುಂದುವರಿದರೆ ಕುಡಿಯುವ ನೀರಿಗಾಗಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮದ ಶೋಭಾ, ಮೀನಾಕ್ಷಿ, ಸುಮಿತ್ರಾ, ಲಲಿತಾ, ನಂಜಮ್ಮ, ಮಂಜಮ್ಮ, ಹರೀಶ್, ಪೂಜಾರಿ ಸ್ವಾಮಿ, ರವಿ, ಪ್ರೇಮ್ ಕುಮಾರ್, ಸುರೇಶ್, ದರ್ಶನ್, ಯಶ್ವಂತ್, ಅಪ್ಪನ ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net