ಹಾಸನದಲ್ಲಿ ರೈಲು ಡಿಕ್ಕಿಯಾಗಿ ಒಂಟಿ ಸಲಗ ದಾರುಣ ಸಾವು

Elephant
Published on

ಹಾಸನ: ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಮಂಗಳವಾರ ರಾತ್ರಿ ರೈಲಿಗೆ ಸಿಲುಕಿ ಕಾಡಾನೆಯೊಂದು ದಾರುಣ ಸಾವಿಗೀಡಾಗಿದೆ.

ಬೆಂಗಳೂರು-ಕಾರವಾರ ಮಾರ್ಗದ ರೈಲಿಗೆ ಸಿಲುಕಿ ಒಂಟಿ ಸಲಗ ಸಾವಾಗಿದೆ. ಬೆಂಗಳೂರಿನಿಂದ ಕಾರವಾರಕ್ಕೆ ರಾತ್ರಿ 11.30ರ ವೇಳೆ (ನಂ. 06585 ರೈಲು) ತೆರಳುತ್ತಿತ್ತು.

ಡಿಕ್ಕಿಯ ಪರಿಣಾಮ ಪ್ರಯಾಣಿಕರಿರುವ ರೈಲು ಸ್ಥಳದಲ್ಲೇ ನಿಂತಿದೆ. ಗುಂಪಿನಿಂದ ಬೇರ್ಪಟ್ಟಿದ್ದ ಒಂಟಿ ಸಲಗ ಕೆಲ ದಿನಗಳಿಂದ ರೈಲ್ವೆ ಹಳಿ ಮೇಲೆ ಹಾಗೂ ರಾಷ್ಟೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿತ್ತು. ಮಲೆನಾಡಿನಲ್ಲಿ ಕಾಡಾನೆ ಸಂತತಿ ಹೆಚ್ಚಿದ್ದು ಒಂದಿಲ್ಲೊಂದು ಅವಘಡ ಸಂಭವಿಸುತ್ತಲೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net