ನ್ಯಾಯಕ್ಕಾಗಿ ಪೆಟ್ರೋಲ್ ಹಿಡಿದು ಮೊಬೈಲ್ ಟವರ್​ ಏರಿದ ದಂಪತಿ..!

Tower Couple
Published on

ಹಾಸನ: ನ್ಯಾಯಕ್ಕಾಗಿ ಆಗ್ರಹಿಸಿ ಪೆಟ್ರೋಲ್​ ಹಿಡಿದು ದಂಪತಿ ಮೊಬೈಲ್​ ಟವರ್​ ಏರಿರುವ ಘಟನೆ ಹಾಸನದ ಬೇಲೂರು ತಾಲೂಕಿನ ದೇವರಾಜಪುರದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದಲ್ಲಿ ಒಂದೂವರೆ ಎಕರೆ ಸರ್ಕಾರಿ ಜಾಗವನ್ನು ಅಧಿಕಾರಿಗಳು ಉಳ್ಳವರ ಪಾಲಿಗೆ ಬರೆದುಕೊಟ್ಟಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ನೂರಾರು ಕುಟುಂಬಗಳಿಗೆ ವಾಸ ಮಾಡಲು ಜಾಗವಿಲ್ಲ. ನಮ್ಮವರಿಗೆ ಸಿಗದ ಜಾಗ ಉಳ್ಳವರು ಪಾಲು ಆಗಿದ್ದು ಹೇಗೆ? ಎಂದು ಪ್ರಶ್ನಿಸಿರುವ ದಂಪತಿ, ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಆಗ್ರಹಿಸಿದ್ದಾರೆ. ನಮಗೆ ನ್ಯಾಯ ಸಿಗೋವರೆಗೂ ಟವರ್​ನಿಂದ ಕೆಳಗೆ ಇಳಿಯುವುದಿಲ್ಲವೆಂದು ಹಠಹಿಡಿದಿದ್ದಾರೆ.

ನ್ಯಾಯ ಸಿಗಲಿಲ್ಲವೆಂದರೆ ಪೆಟ್ರೋಲ್ ಹಾಕಿಕೊಂಡು ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗ್ಗೆ ಆರು ಗಂಟೆಯಿಂದಲೇ ದಂಪತಿ ಮೋಹನ್ ರಾಜ್ ಹಾಗೂ ಚಂದಾ ಟವರ್​ ಏರಿದ್ದಾರೆ.

ಸ್ಥಳದಲ್ಲಿ ಆಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮೊಕ್ಕಾಂ ಹೂಡಿದ್ದು, ಕೆಳಗಿಳಿಸಲು ಹರಸಹಸ ಪಡುತ್ತಿದ್ದಾರೆ. ಆದರೆ, ಏನೇ ಹೇಳಿದ್ರು ನ್ಯಾಯ ಸಿಗೋವರೆಗೂ ಕೆಳಗಿಳಿಯುದಿಲ್ಲವೆಂದು ದಂಪತಿ ಹಠಕ್ಕೆ ಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net