More

    ನಿನ್ನೆ ಸಂಜೆಯಷ್ಟೇ ಸಂಭ್ರಮಿಸಿದ್ದ ಬೆಳಗೆರೆ ಕುಟುಂಬದಲ್ಲಿ ಬೆಳಗಾಗುವಷ್ಟರಲ್ಲಿ ಆವರಿಸಿತು ಶೋಕದ ಕಾರ್ಮೋಡ!

    ಬೆಂಗಳೂರು: ಬರವಣಿಗೆ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಅಕ್ಷರ ಮಾಂತ್ರಿಕ ಹಾಗೂ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ.

    ಬರೆಯುತ್ತಲೇ ಬದುಕು ಅಂತ್ಯಗೊಳಿಸಿದ ರವಿ ಬೆಳಗೆರೆಯವರ ಮನೆಯಲ್ಲಿ ನಿನ್ನೆ ಸಂಜೆಯಷ್ಟೇ ಸಂಭ್ರಮವೊಂದು ಮನೆ ಮಾಡಿತ್ತು. ಆದರೆ, ಬೆಳಗ್ಗೆಯಾಗುವಷ್ಟರಲ್ಲಿ ಇಡೀ ಕುಟುಂಬವನ್ನು ಶೋಕದ ಕಾರ್ಮೋಡ ಆವರಿಸಿರುವುದು ವಿಧಿಯ ಕ್ರೂರತ್ವಕ್ಕೆ ಸಾಕ್ಷಿಯಾಗಿದೆ.

    ಇದನ್ನೂ ಓದಿ: ಬದುಕಿಡೀ ಬರೆದ ರವಿ ಬೆಳಗೆರೆ; ಬರೆಯುತ್ತಲೇ ಬದುಕು ಮುಗಿಸಿದರು…

    ಗುರುವಾರ ಸಂಜೆ ರವಿ ಬೆಳಗೆರೆ ಮಗ ಕರ್ಣನ 9 ತಿಂಗಳ ಮಗುವನ್ನು ಮನೆಗೆ ಕರೆತರಲಾಗಿತ್ತು. ಅಜ್ಜಿ ಮನೆಯಲ್ಲಿದ್ದ ಮೊಮ್ಮಗ ಮನೆಗೆ ಬಂದ ಖುಷಿಯಲ್ಲಿ ಬೆಳೆಗೆರೆ ಕುಟುಂಬಸ್ಥರು ಸಂಭ್ರಮಾಚರಣೆ ಮಾಡಿದ್ದರು. ಬೆಳಗೆರೆ ಅವರು ಫೋನ್​ನಲ್ಲೇ ಸಂತಸ ವ್ಯಕ್ತಪಡಿಸಿ, ಪದ್ಮನಾಭನಗರದ ಕಚೇರಿಯಲ್ಲಿಯೇ ಉಳಿದಿದ್ದರು.

    ಬರೆಯುತ್ತಲೇ ಇದ್ದ ಬೆಳೆಗೆರೆ ಅವರಿಗೆ ಮಧ್ಯರಾತ್ರಿ 12.15ರ ಸಮಯದಲ್ಲಿ ಹೃದಯಾಘಾತವಾಗಿದೆ. ಕೊನೆಯ ಹಂತದಲ್ಲಿ ರಾಜ್ಯ ರಾಜಕಾರಣದ ಕುರಿತು ರೋಚಕ ಪುಸ್ತಕವೊಂದನ್ನು ಬರೆಯುತ್ತಿದ್ದ ಅವರಿಗೆ ಬರವಣಿಗೆಯಲ್ಲಿ ತೊಡಗಿದ್ದಾಲೇ ಹೃದಯಾಘಾತ ಸಂಭವಿಸಿ, ಇಹಲೋಕ ತ್ಯಜಿಸಿದ್ದಾರೆ.

    ಇದನ್ನೂ ಓದಿ: ಯಾರು ಕೂಡ ಸಾವಿನ ತನಕ ನಮ್ಮ ಜತೆ ಬರೋದಿಲ್ಲ, ನಮ್ ಜೊತೆ ಸಾಯಲ್ಲ: ರವಿ ಬೆಳಗೆರೆ

    ರವಿ ಬೆಳಗೆರೆ ಅವರ ಪಾರ್ಥಿವ ಶರೀರದ ಅಂತಿಮ ವಿಧಿ-ವಿಧಾನ ಇಂದು ಸಂಜೆ 4 ಗಂಟೆಗೆ ನಡೆಯಲಿದೆ. ಬನಶಂಕರಿಯ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ. ಅದಕ್ಕೂ ಮುನ್ನ ಇಂದು ಬೆಳಗ್ಗೆ 9ರ ಬಳಿಕ ಬೆಂಗಳೂರಿನ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಆಪ್ತ ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

    ರವಿ ಬೆಳಗೆರೆ ನಿಧನ; ಪ್ರಾರ್ಥನಾ ಶಾಲಾ ಆವರಣದಲ್ಲಿ 9 ಗಂಟೆ ಬಳಿಕ ಸಾರ್ವಜನಿಕ ಅಂತಿಮ ದರ್ಶನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts