

ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದ ಕಿರುತೆರೆ ನಟಿ ಹಾಗೂ ಕಳೆದ ಆವೃತ್ತಿಯ ಬಿಗ್ಬಾಸ್ ಸ್ಪರ್ಧಿ ದೀಪಿಕಾ ದಾಸ್, ರವಿ ಬೆಳಗೆರೆಯೊಂದಿಗೆ ಬಿಗ್ಬಾಸ್ನಲ್ಲಿ ಕಳೆದ ಕ್ಷಣಗಳನ್ನು ನೆನೆದು ಭಾವುಕರಾದರು.
ರವಿ ಬೆಳಗೆರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕಣ್ಣಿರು ಸುರಿಸುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪಿಕಾ, ಬಿಗ್ಬಾಸ್ನಲ್ಲಿ ನಾವೆಲ್ಲ ಒಟ್ಟಾಗಿದ್ದೆವು. ಒಂದು ವಾರವಷ್ಟೇ ಅವರೊಟ್ಟಿಗೆ ಸಮಯ ಕಳೆದೆವು ಎಂದರು.
ಕೆಲ ಜನರು ಹೇಳೋ ರವಿ ಬೆಳೆಗೆರೆನೆ ಬೇರೆ. ನಮ್ಮ ಜತೆ ಇದ್ದ ರವಿ ಬೆಳಗೆರೆನೇ ಬೇರೆ. ಕೆಲ ಜನರು ಅವರನ್ನ ತುಂಬಾ ಕ್ರೂರಿ ತರ ನೋಡುತ್ತಿದ್ದರು. ಆದರೆ, ಬಿಗ್ಬಾಸ್ ಮನೆಯಲ್ಲಿ ತುಂಬಾ ಮುಗ್ಧರಂತಿದ್ದರು. ನಿಜಕ್ಕೂ ಇವತ್ತು ಅವರಿಲ್ಲ ಅಂದ್ರೆ ನಮಗೆ ತುಂಬಾ ನೋವಾಗುತ್ತೆ ಎಂದು ದೀಪಿಕಾ ಕಣ್ಣೀರಾಕಿದರು.
ಇನ್ನು ಕಳೆದ ಬಿಗ್ಬಾಸ್ ಆವೃತ್ತಿಯಲ್ಲಿ ರವಿ ಬೆಳಗೆರೆ ಅವರು ಒಂದು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದರು. ಸ್ಪರ್ಧಿಯಾಗಿ ಇರದೇ ಅತಿಥಿಯಾಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರವಿ ಬೆಳಗೆರೆ ಅವರು ತುಂಬಾ ಲವಲವಿಕೆಯಿಂದ ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು. ಅವರು ಬಿಗ್ಬಾಸ್ ಮನೆಯಲ್ಲಿದ್ದಷ್ಟು ಕಾಲ ಮನರಂಜನೆಗೂ ಕೊರತೆ ಇರಲಿಲ್ಲ. ಅಲ್ಲದೆ, ಅನೇಕ ಸ್ವಾರಸ್ಯಕರ ಕತೆಗಳನ್ನು ಜನರ ಮುಂದಿಡುತ್ತಿದ್ದರು. (ದಿಗ್ವಿಜಯ ನ್ಯೂಸ್)