ಕಾಡಬೆಟ್ಟು ವಗ್ಗ ಶೌರ್ಯ ತಂಡದಿಂದ ಶ್ರಮದಾನ

Btw_Shourya Team
Published on

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಕಾಡಬೆಟ್ಟು ವಗ್ಗ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಬಂಟ್ವಾಳ ತಾಲೂಕಿನ ಕಾಡಬೆಟ್ಟು ಅಂತರಂಗಡಿಯಿಂದ ಕಾಡಬೆಟ್ಟು ಕೊಡಮಣಿತ್ತಾಯ ಪಂಜುರ್ಲಿ ದೈವಸ್ಥಾನ ವರೆಗೆ ರಸ್ತೆ ಬದಿ ಬೆಳೆದ ಕಳೆಗಿಡಗಳನ್ನು ಕಡಿದು ಸ್ವಚ್ಛತಾ ಶ್ರಮದಾನ ಮಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆ ಸದಸ್ಯ ಶ್ರೀಧರ ಪೈ, ನೀಲಪ್ಪ ಪೂಜಾರಿ, ಶ್ರಮದಾನದ ಸಂದರ್ಭ ಭಾಗವಹಿಸಿ ಪ್ರೋತ್ಸಾಹಿಸಿದರು. ಶೌರ್ಯ ಘಟಕ ಕಾಡಬೆಟ್ಟು ವಗ್ಗದ ಸಂಯೋಜಕಿ ರೇಖಾ ಪಿ, ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರಾದ ಸಂಪತ್ ಶೆಟ್ಟಿ, ಮಹಾಬಲ ರೈ, ನಾರಾಯಣ್ ಶೆಟ್ಟಿ, ಲಕ್ಷ್ಮಣ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net