ದೈಹಿಕ ವ್ಯಾಯಾಮದಿಂದ ದೇಹ ಬೆಳವಣಿಗೆ: ಜಿನ್ನಪ್ಪ ಏಲ್ತಿಮಾರ್ ಹೇಳಿಕೆ

Btw_Tag of war
Published on

ಬಂಟ್ವಾಳ: ದೈಹಿಕ ವ್ಯಾಯಾಮಗಳು ದೇಹದ ಬೆಳವಣಿಗೆಗೆ ಸಹಕಾರಿ ಎಂದು ಜನಶಕ್ತಿ ಸೇವಾ ಟ್ರಸ್ಟ್ ಕುದ್ರಬೆಟ್ಟು ಅಧ್ಯಕ್ಷ ಜಿನ್ನಪ್ಪ ಏಲ್ತಿಮಾರ್ ಹೇಳಿದರು.

ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು, ಹಳೇ ವಿದ್ಯಾರ್ಥಿ ಸಂಘ ಕುದ್ರೆಬೆಟ್ಟು ಆಶ್ರಯದಲ್ಲಿ ಸ್ಥಳೀಯ 8 ತಂಡಗಳ ಹಗ್ಗ ಜಗ್ಗಾಟ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಯುವಶಕ್ತಿ ಅಧ್ಯಕ್ಷ ಲೋಕಾನಂದ ಏಲ್ತಿಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು, ಜನಶಕ್ತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಧರ್ಮದ ಬಳ್ಳಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕೇಶವ ಏಳ್ತೀಮರ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶಿವರಾಜ್, ಕಾರ್ಯದರ್ಶಿ ನೀತು ಅಮೀನ್, ಗ್ರಾಪಂ ಮಾಜಿ ಅಧ್ಯಕ್ಷ ಸುಂದರ ಸಾಲಿಯಾನ್, ಟ್ರಸ್ಟಿಗಳಾದ ರವಿ ಸುವರ್ಣಬೈಲು, ಶಂಕರ ಕುದ್ರೆಬೆಟ್ಟು, ಉದ್ಯಮಿ ಗಣೇಶ್, ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ಶೇಖರ, ಜನಾರ್ದನ, ಅಣ್ಣು ಪೂಜಾರಿ, ಮಾಧವ, ಸನತ್ ಕುಮಾರ್, ಸತೀಶ್, ತೀರ್ಪುಗಾರರಾದ ನಾಗೇಶ್ ಪೊನ್ನೋಡಿ, ಜಯಕರ ಕಾಂಚನ್, ಸಂಘಟಕ ಹೇಮಂತ್ ಕುಮಾರ್ ಬೋಲ್ಪೊಡಿ ಉಪಸ್ಥಿತರಿದ್ದರು.

ಅಂಚೆ ಕಚೇರಿಯ ಜನಸಂಪರ್ಕ ರಕ್ಷಣಾ ಜೀವವಿಮೆ ನೊಂದಣಿ ಕ್ಯಾಂಪ್ ನಡೆದು 46 ಮಂದಿ ಸದುಪಯೋಗ ಪಡೆದುಕೊಂಡರು. ರಕ್ತೇಶ್ವರಿ ಸುಧೆಕಾರು ಪ್ರಥಮ ಸ್ಥಾನ, ಕುರ್ಮಾನ್ ಯಂಗ್ ಬಾಯ್ಸ ದ್ವಿತೀಯ ಸ್ಥಾನ ಪಡೆದುಕೊಂಡಿತು. ಭೋಜರಾಜ ಸ್ವಾಗತಿಸಿದರು. ಸಂತೋಷ್ ಕುಮಾರ್ ಬೊಲ್ಪೊಡಿ ವಂದಿಸಿದರು. ಯೋಗೇಶ್ ತೋಟ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net