ಪುತ್ತೂರು: ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಐವರು ವಿದ್ಯಾರ್ಥಿಗಳು ಇನ್ಸೆಫ್ ರೀಜನಲ್ ಫೇರ್ಗೆ ಆಯ್ಕೆಯಾಗಿದ್ದು, ಡಿ.5ರಂದು ಮೂಡುಬಿದಿರೆಯಲ್ಲಿ ನಡೆಯುವ ಇನ್ಸೆಫ್ ರೀಜನಲ್ ಸಯನ್ಸ್ ಫೇರ್ನಲ್ಲಿ ಭಾಗವಹಿಸಲಿದ್ದಾರೆ.
ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ಇನ್ಸೆಫ್ ಸಯನ್ಸ್ ಸೊಸೈಟಿ ಆಫ್ ಇಂಡಿಯಾ ನಡೆಸುವ ಇನ್ಸೆಫ್ ರೀಜನಲ್ ಸಯನ್ಸ್ ಫೇರ್ನಲ್ಲಿ ಆನ್ಲೈನ್ ಮುಖಾಂತರ ನಡೆಸಿದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ 9ನೇ ತರಗತಿಯ ವಿದ್ಯಾರ್ಥಿಗಳಾದ ಶಮನ್ ಎನ್ - ಸ್ಮಾರ್ಟ್ ವೇಸ್ಟ್ ಮಾನಿಟರಿಂಗ್ ಸಿಸ್ಟಮ್ ಎಂಬ ವಿಜ್ಞಾನ ಮಾದರಿ, ಪ್ರಮಥ್ ಶಾನ್ಬಾಗ್ ರೋಡ್ ಆ್ಯಲ್ಸಿಡೆಂಟ್ ಪ್ರಿವೆನ್ಶನ್ ಸಿಸ್ಟಮ್, ವಿಜ್ಞಾನ ಮಾದರಿ, ಸುಪ್ರಜಾ ರಾವ್ ಅವರ ನಾರಿಕೇಳ ದೆ ಹೀಲಿಂಗ್ ವಿಜ್ಞಾನ ಮಾದರಿ, 8ನೇ ತರಗತಿಯ ವಿದ್ಯಾರ್ಥಿಗಳಾದ ಸಮದ್ಧ್ ಆರ್ ಶೆಟ್ಟಿ ಅವರ ಆವಿಸ್ಕಾರ್ ದ ಲ್ಯಾಂಡ್ಮೈನ್ ಡಿಟೆಕ್ಷನ್ ರೋಬೋಟ್ ವಿಜ್ಞಾನ ಮಾದರಿ, ಕ್ಷಮಿತ್ ಜೈನ್ ಅವರ ಸೋಲಾರ್ ಟ್ರ್ಯಾಕಿಂಗ್ ಸಿಸ್ಟಮ್ ವಿಜ್ಞಾನ ಮಾದರಿ ಮುಂದಿನ ಹಂತದ ಸ್ಪರ್ಧೆಗಳಿಗೆ ಆಯ್ಕೆಯಾಗಿದೆ.