

ಸುಳ್ಯ: ಸೌತ್ ಕೆನರಾ ಫೋಟೋಗ್ರಾಫಸ್ ಅಸೋಸಿಯೇಶನ್ ಸುಳ್ಯ ವಲಯದ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ ಕೂಸು ಮರಿ ಮಕ್ಕಳ ಫೋಟೋ ಸ್ಪರ್ಧೆ ವಿಜೇತರಾದವರಿಗೆ ಹಿರಿಯ ಫೋಟೋಗ್ರಾಫರ್ ಆರ್.ಕೆ.ಭಟ್ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸುಳ್ಯ ವಲಯದ ಸ್ಥಾಪಕಾಧ್ಯಕ್ಷ ಸ್ಟುಡಿಯೋ ಗೋಪಾಲ್, ಯಶ್ವಿತ್ ಕಾಳಮ್ಮನೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸುಳ್ಯ ವಲಯ ಅಧ್ಯಕ್ಷ ಶಶಿ ಗೌಡ ಉಪಸ್ಥಿತರಿದ್ದರು. ಆರ್.ಕೆ.ಭಟ್ ಅವರನ್ನು ಅಸೋಸಿಯೇಶನ್ ವತಿಯಿಂದ ಗೌರವಿಸಲಾಯಿತು. ಅವಿನ್ ಬೆಟ್ಟಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಫೋಟೋಗ್ರಾಫರ್ ಅಸೋಸಿಯೇಶನ್ ಪದಾಧಿಕಾರಿಗಳು, ಪಾಲಕರು ಉಪಸ್ಥಿತರಿದ್ದರು.