

ಕಡಬ: ಶೈಕ್ಷಣಿಕ ಪ್ರಗತಿಯಿಂದ ಸುಶಿಕ್ಷಿತ ಸವಾಜ ನಿರ್ವಾಣವಾಗುತ್ತದೆ ಎನ್ನುವ ಧ್ಯೇಯೋದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ದ.ಕ. ಜಿಲ್ಲಾ 2 ನಿರ್ದೇಶಕ ಪ್ರವೀಣ್ ಕುವಾರ್ ಹೇಳಿದರು.
ಕಡಬ ತಾಲೂಕು ಕುಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಾಲೆಗೆ ನೀಡಲ್ಪಟ್ಟ ಕರಿಹಲಗೆ ಮತ್ತು ಅದರ ಮಂಜೂರಾತಿ ಪತ್ರ ಹಸ್ತಾಂತರಿಸಿ ವಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ವಾಜಿ ಅಧ್ಯಕ್ಷ ಹರೀಶ್ ಕೊಡುಗೆ ಸ್ವೀಕರಿಸಿದರು. ಶಾಲಾ ಮುಖ್ಯ ಗುರು ಸುಮಿತ್ರಾ ಅಧ್ಯಕ್ಷತೆ ವಹಿಸಿದ್ದರು. ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ, ಅಲಂಕಾರು ವಲಯ ಒಕ್ಕೂಟಗಳ ಅಧ್ಯಕ್ಷ ಉಮೇಶ್ ಕುಂತೂರು, ಒಕ್ಕೂಟದ ಅಧ್ಯಕ್ಷ ಲಕ್ಷ್ಮೀಶ, ಕುಂತೂರು ಶ್ರೀ ಶಾರದಾ ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿದರು. ಆಲಂಕಾರು ವಲಯ ಮೇಲ್ವಿಚಾರಕಿ ಸುಜಾತಾ ನಿರೂಪಿಸಿದರು. ಚನ್ನಕೇಶವ ಗುತ್ತುಪಾಲು ವಂದಿಸಿದರು.