ಕಿಟ್ ಖರೀದಿಸಲು ಸಹಾಯಧನ ಹಸ್ತಾಂತರ

kit
ಪ್ರಸಿದ್ಧ ಮುಳುಗು ತಜ್ಞ ಗಂಗೊಳ್ಳಿ ದಿನೇಶ್ ಖಾರ್ವಿ ಅವರಿಗೆ ಆಕ್ಸಿಜನ್ ಕಿಟ್ ಖರೀದಿಸಲು ಶ್ರೀಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನದ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು
Published on

ಗಂಗೊಳ್ಳಿ: ಹಲವು ದಶಕಗಳಿಂದ ನೀರಿನಲ್ಲಿ ಬಿದ್ದವರ ಜೀವ ಬದುಕಿಸುವ, ಈವರೆಗೆ 300ಕ್ಕೂ ಅಧಿಕ ಮೃತದೇಹವನ್ನು ನದಿ, ಕೆರೆ, ಸಮುದ್ರದಿಂದ ಹೊರತೆಗೆದು ಕುಟುಂಬಸ್ಥರಿಗೆ ಒಪ್ಪಿಸಿ, ನಿಸ್ವಾರ್ಥ ಸಮಾಜಸೇವೆ ಮಾಡುತ್ತಿರುವ ಮುಳುಗುತಜ್ಞ ಗಂಗೊಳ್ಳಿ ದಿನೇಶ್ ಖಾರ್ವಿಗೆ ಆಕ್ಸಿಜನ್ ಕಿಟ್ ಖರೀದಿಸಲು ಶ್ರೀಕ್ಷೇತ್ರ ಧರ್ಮಸ್ಥಳದಿಂದ 50 ಸಾವಿರ ರೂ. ಸಹಾಯಧನ ಮಂಜೂರಾಗಿದೆ.

ಮಂಜೂರಾತಿ ಪತ್ರವನ್ನು ಭಾನುವಾರ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಿನಾಯಕ ಪೈಯವರು ದಿನೇಶ ಖಾರ್ವಿಗೆ ಹಸ್ತಾಂತರಿಸಿದರು. ಗಂಗೊಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಆಕ್ಸಿಜನ್ ಕಿಟ್‌ನ ಅವಶ್ಯಕತೆ, ಆಕ್ಸಿಜನ್ ಕಿಟ್ ಖರೀದಿಸಲು ದಿನೇಶ ಖಾರ್ವಿ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಲ್ಲಿ ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net