ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

concluding
ಬಿದ್ಕಲ್‌ಕಟ್ಟೆ ಕೆಪಿಎಸ್ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ಜರುಗಿದ 19ನೇ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ವೈದ್ಯ ಮಂಜುನಾಥ ಆಸ್ಪತ್ರೆ ಮುಖ್ಯಸ್ಥ ಡಾ.ಎಂ.ವಿ.ಕುಲಾಲ್, ಶ್ರೇಷ್ಠ ಸಾಧಕ ಮೂಡುಬಿದಿರೆ ಎಸ್‌ಕೆಎಫ್ ಎಂ.ಡಿ. ಡಾ.ರಾಮಕೃಷ್ಣ ಆಚಾರ್ಯ ಮೊದಲಾದವರನ್ನು ಸನ್ಮಾನಿಸಲಾಯಿತು
Published on

ಜನ್ನಾಡಿ: ಬಿದ್ಕಲ್‌ಕಟ್ಟೆ ಕೆಪಿಎಸ್ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ಆಯೋಜಿಸಲಾದ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಕಸಾಪ ಕುಂದಾಪುರ ಘಟಕ ಅಧ್ಯಕ್ಷ ಡಾ.ಉಮೇಶ ಪುತ್ರನ್ ಅಧ್ಯಕ್ಷತೆಯಲ್ಲಿ ಜರುಗಿತು. ಉಡುಪಿ ಜಿಲ್ಲೆ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸಮ್ಮೇಳನಾಧ್ಯಕ್ಷ ಪ್ರೊ.ಬಾಲಕೃಷ್ಣ ಶೆಟ್ಟಿ ಬಿದ್ಕಲ್‌ಕಟ್ಟೆ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಹೇಶ ಹೆಗ್ಡೆ ಮೊಳಹಳ್ಳಿ, ತಾಲೂಕು ಆರ್ಥಿಕ ಸಮಿತಿ ಅಧ್ಯಕ್ಷ ಬಿ.ಅರುಣಕುಮಾರ ಹೆಗ್ಡೆ, ಹೊಸಾಡು ಡಾ.ಕಿಶೋರ ಕುಮಾರ ಶೆಟ್ಟಿ, ಸಾಂಸ್ಕೃತಿಕ ಮತ್ತು ವೇದಿಕೆ ನಿರ್ವಾಹಣಾ ಸಮಿತಿ ಸಂಚಾಲಕ ಕೆಪಿಎಸ್ ಬಿದ್ಕಲ್‌ಕಟ್ಟೆ ಉಪಪ್ರಾಂಶುಪಾಲ ಕರುಣಾಕರ ಶೆಟ್ಟಿ, ಸ್ವಯಂಸೇವಕ ಸಮಿತಿ ಸಂಚಾಲಕ ಮನೋಜ್ ಕುಮಾರ್ ಶೆಟ್ಟಿ, ನೋಂದಣಿ ಸಮಿತಿ ಶೋಭಾ ಸಿ.ಶೆಟ್ಟಿ, ಮೆರವಣಿಗೆ ಸಮಿತಿ ಸಂಚಾಲಕ ದೀನಪಾಲ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಚಂದ್ರಶೇಖರ ಶೆಟ್ಟಿ ಮಣಿಗೇರಿ, ಆರೋಗ್ಯ ಸಮಿತಿ ಸಂಚಾಲಕ ಡಾ.ರಾಘವೇಂದ್ರ ಹೆಬ್ಬಾರ್, ಊಟೋಪಚಾರ ಸಮಿತಿ ವಸಂತಿ ಮಂಜಯ್ಯ ಶೆಟ್ಟಿ, ಮಳಿಗೆ ನಿರ್ವಹಣಾ ಸಮಿತಿ ಪ್ರಕಾಶ ಶೆಟ್ಟಿ ಕೆಪಿಎಸ್ ಬಿದ್ಕಲ್‌ಕಟ್ಟೆ, ಪ್ರೊ.ಬಾಲಕೃಷ್ಣ ಶೆಟ್ಟಿ ಅವರ ಪತ್ನಿ ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭಕ್ಕೆ ಮೊದಲು ಕುಂದಾಪುರ ಕನ್ನಡದ ಹೊಸ ಸಾಧ್ಯತೆಗಳು, ಜನಪದ ಗೀತಗಾಯನ, ಬಹುವಿಧ ಗೋಷ್ಠಿ, ಚಿಣ್ಣರ ವೈವಿಧ್ಯ, ಅಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು ಕಾರ್ಯಕ್ರಮಗಳು ಜರುಗಿದವು. ಕೊನೆಗೆ ಜಾನಪದ ತಿಲ್ಲಾನ, ವೀರಗಾಸೆ, ಜಾನಪದ ನೃತ್ಯ ಸಿರಿ ಕಾರ್ಯಕ್ರಮ ಜರುಗಿತು. ಕುಂದಾಪುರ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ದಿನಕರ ಶೆಟ್ಟಿ ಸ್ವಾಗತಿಸಿದರು. ಅಕ್ಷತಾ ಗಿರೀಶ್ ನಿರೂಪಿಸಿದರು. ಪಲ್ಲವಿ ಬಿದ್ಕಲ್‌ಕಟ್ಟೆ ನಿರ್ವಹಣೆ ಮಾಡಿದರು. ಅಧ್ಯಾಪಕ ಸತೀಶ ಶೆಟ್ಟಿಗಾರ್ ವಂದಿಸಿದರು.

ಸಾಧಕರಿಗೆ ಗೌರವಾರ್ಪಣೆ

ವೈದ್ಯ ಮಂಜುನಾಥ ಆಸ್ಪತ್ರೆ ಮುಖ್ಯಸ್ಥ ಡಾ.ಎಂ.ವಿ.ಕುಲಾಲ್, ಮೂಡುಬಿದಿರೆ ಎಸ್‌ಕೆಎಫ್ ಎಂ.ಡಿ ಡಾ.ರಾಮಕೃಷ್ಣ ಆಚಾರ್ಯ, ಉದ್ಯಮ ಕ್ಷೇತ್ರದಲ್ಲಿ ಜಗನ್ನಾಥ್ ಶೆಟ್ಟಿ ಚಿಟ್ಟೆಬೈಲು, ಜಾನಪದ ಸಾಹಿತ್ಯದಲ್ಲಿ ಶಿವರಾಮ ಪಾಣ ಶಿರಿಯಾರ, ಯೋಗ ಮತ್ತು ನಾಟಿ ವೈದ್ಯ ಕಿರಣ್‌ಕುಮಾರ್ ಬಿ., ಕೃಷಿ ಕ್ಷೇತ್ರದಲ್ಲಿ ಪದ್ಮನಾಭ ಕಿಣಿ ಹಾವಳಿ, ಪ್ರಾಚ್ಯ ವಸ್ತು ಸಂಗ್ರಹಲ್ಲಿ ಶ್ರೀನಿವಾಸ ಕೆಪಿಎಸ್ ಬಿದ್ಕಲ್‌ಕಟ್ಟೆ, ಸಾಹಿತ್ಯ ಕ್ಷೇತ್ರದಲ್ಲಿ ಬಿ.ಮಂಜುನಾಥ ಕಾಮತ್ ಹಾಲಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮಣಿಗೇರಿ ಚಂದ್ರಶೇಖರ ಶೆಟ್ಟಿ, ಯಕ್ಷಗಾನದಲ್ಲಿ ರವೀಂದ್ರ ದೇವಾಡಿಗ, ಯಕ್ಷ ಸಾಹಿತ್ಯದಲ್ಲಿ ಶಾಂತಾ ವಾಸುದೇವ ಪೂಜಾರಿ, ಸಮಾಜಸೇವೆಗಾಗಿ ಡೇವಿಡ್ ಸಿಕ್ವೇರಾ, ಕೃಷ್ಣೋಡು ಗಣಪಯ್ಯ ಶೆಟ್ಟಿ, ಹೈನುಗಾರಿಕೆಯಲ್ಲಿ ಶೀನ ಪೂಜಾರಿ ಕೊಳನ್‌ಕಲ್, ಸಂಘ ಸಂಸ್ಥೆಯಲ್ಲಿ ಸಹನಾ ಯುವತಿ ಮಂಡಲ ಗೋಪಾಡಿ, ಪತ್ರಿಕೋದ್ಯಮದಲ್ಲಿ ಮಂಜುನಾಥ ಶೆಣೈ ಜನ್ನಾಡಿ, ಬಾಲ ಪ್ರತಿಭಾ ಪುರಸ್ಕಾರದಲ್ಲಿ ಯುಕ್ತಿ ಉಡುಪ ಬಳ್ಕೂರು, ಪೂಜಾ ಆಚಾರ್ ತೆಕ್ಕಟ್ಟೆ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net