

ಮುಳ್ಳೇರಿಯ: ಮುಖ್ಯಮಂತ್ರಿಗಳ ದುರಂತ ಪರಿಹಾರ ನಿಧಿಗೆ ಶ್ರೀಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಧನಸಹಾಯ ನೀಡಲಾಯಿತು.
ಜಿಲ್ಲಾಧ್ಯಕ್ಷ ಎನ್.ಎಂ.ನಾರಾಯಣನ್ ನಂಬೀಶನ್, ಎಸ್.ಪಿ.ಎಸ್.ಎಸ್ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಸನೋಜ್ ಕೆ.ಎಂ ಅವರಿಗೆ ಇತ್ತೀಚೆಗೆ ಚೆಕ್ ಹಸ್ತಾಂತರಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಜೇಶ್ ಇ, ಖಜಾಂಚಿ ಶ್ರೀದೇವಿ ಎಂ, ಜತೆ ಕಾರ್ಯದರ್ಶಿ ಸೋಮನಾಥನ್ ಎಂ, ಮಹಿಳಾ ವೇದಿಕೆ ಅಧ್ಯಕ್ಷೆ ಶೈಲಜಾ ಉಪಸ್ಥಿತರಿದ್ದರು. ಕಾಸರಗೋಡು ಪ್ರಾದೇಶಿಕ ಸಭೆಯ ಕೋಶಾಧಿಕಾರಿ ಶ್ರೀಪ್ರಿಯಾ ರಾಜೇಶ್, ಹೊಸದುರ್ಗ ಪ್ರಾದೇಶಿಕ ಸಮಿತಿ ಜತೆ ಕಾರ್ಯದರ್ಶಿ ವಿಷ್ಣು ಪ್ರಸಾದ್, ಕೇಂದ್ರ ಪ್ರತಿನಿಧಿ ರಾಧಾಕೃಷ್ಣನ್ ಕೆ.ಎಂ, ಹೊಸದುರ್ಗ ಮಹಿಳಾ ವೇದಿಕೆ ಉಪಾಧ್ಯಕ್ಷೆ ಶ್ರೀಜಾ ರಾಧಾಕೃಷ್ಣನ್, ಕೋಶಾಧಿಕಾರಿ ವಾರಿಜಾ, ಯುವ ವೇದಿಕೆ ಪದಾಧಿಕಾರಿಗಳಾದ ಅಮೃತಾ ಸನೋಜನ್, ಸುಚಿತ್ರಾ ಮಾತನಾಡಿದರು.