ಕನ್ಯಾಡಿ ಗಣೇಶೋತ್ಸವ ಆಮಂತ್ರಣ ಬಿಡುಗಡೆ

ganesha 19
Published on

ಬೆಳ್ತಂಗಡಿ: ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುವ ಕನ್ಯಾಡಿಯ 11ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಮಂತ್ರಣ ಪತ್ರಿಕೆಯನ್ನು ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಪಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಅವಿನಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗೋವಿಂದ ಸುವರ್ಣ ಪೊಂಗಾರು, ಉಪಾಧ್ಯಕ್ಷರಾದ ಮನೋಹರ್ ರಾವ್ ಯು.ಬಿ, ಪ್ರಭಾಕರ್ ಗೌಡ ಬೊಲ್ಮ, ಗೌರವ ಸಲಹೆಗಾರರಾದ ಕೃಷ್ಣಪ್ಪ ಗುಡಿಗಾರ್, ರಾಜೇಂದ್ರ ಅಜ್ರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂದ ಭಟ್, ಸ್ವಾಗತ ಸಮಿತಿಯ ಸಂಯೋಜಕ ಮುರಳೀಧರ ದಾಸ್ ಧರ್ಮಸ್ಥಳ, ಧರ್ಮಸ್ಥಳ ಗ್ರಾಪಂ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ ಡಿ, ಹಿಂದು ಧಾರ್ಮಿಕ ಸೇವಾ ಸಮಿತಿ ಉಪಾಧ್ಯಕ್ಷ ಅರುಣ್ ನಾಯ್ಕ ನೆಲ್ಲಿಗುಡ್ಡೆ, ಕೋಶಾಧಿಕಾರಿ ಮಹಾಬಲ ನಾಯ್ಕ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net