

ಮೈಸೂರು: 'ನಾನು ಹಾಳಾಗಿದ್ದೇ ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ' ಎಂದು ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, 'ದೇವೇಗೌಡರು ನಿನ್ನನ್ನ ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ನಿನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದೆ. ನಿನ್ನನ್ನು ಉದ್ದಾರ ಮಾಡೋಕೆ ಹೋಗಿ ನಾನೇ ಹಾಳಾದೆ. ನಿನ್ನ ಅಧಿಕಾರವಧಿಯಲ್ಲೇ ಕುರುಬ ಜನಾಂಗಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. 'ನೀನೇನು ದೇವರಾಜ ಅರಸು, ಹನುಂತಯ್ಯರಿಗಿಂತ ದೊಡ್ಡ ನಾಯಕ ಅಲ್ಲ. ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನೇ ನೀನು? ಎಂದು ಏಕವಚನದಲ್ಲಿ ಹರಿಹಾಯ್ದರು. ಇದನ್ನೂ ಓದಿರಿ ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್ಗೆ ಕಟ್ಟಿಹಾಕಿದ ಗ್ರಾಮಸ್ಥರು!
'ನಾನೇ ಮುಖ್ಯಮಂತ್ರಿ ನಾನೇ ಆಗ್ತೀನಿ ಅಂತಾರೇ. ಇನ್ನೂ ಎರಡೂವರೆ ವರ್ಷ ಇದೆ. ಜನ್ರು ಯಾರಿಗೆ ಆಶೀರ್ವಾದ ಮಾಡ್ತಾರೋ ಯಾರಿಗೆ ಗೊತ್ತು. ಸುಮ್ಮನೆ ಏಕೆ ಬೊಂಬಡಿ ಬಿಡ್ತೀರಿ' ಎಂದರು.